Monday, January 20, 2025
Monday, January 20, 2025

ಭಗವದ್ಗೀತೆಯು ವಿಶ್ವಕ್ಕೆ ಶಾಂತಿಯನ್ನು ಕೊಡುವ ಗ್ರಂಥವಾಗಿದೆ ಪುತ್ತಿಗೆ ಶ್ರೀಪಾದರು

ಭಗವದ್ಗೀತೆಯು ವಿಶ್ವಕ್ಕೆ ಶಾಂತಿಯನ್ನು ಕೊಡುವ ಗ್ರಂಥವಾಗಿದೆ ಪುತ್ತಿಗೆ ಶ್ರೀಪಾದರು

Date:

ಉಡುಪಿ, ಮಾ.31: ಭಗವದ್ಗೀತೆಯು ನೀಡುವ ಸಂದೇಶಗಳನ್ನು ಪಾಲಿಸಿದಾಗ ವಿಶ್ವದ ವಿಕಾಸ ಸಾಧ್ಯ. ಹೃದಯದ ದೌರ್ಬಲ್ಯವೇ ಅಶಾಂತಿಗೆ ಕಾರಣವಾದದ್ದು. ಶ್ರೀಕೃಷ್ಣನು ಗೀತೋಪದೇಶದೊಂದಿಗೆ ಮನಸ್ಸಿನ ದರೊಬಲ್ಯವನ್ನು ನಿವಾರಿಸಿಕೊಳ್ಳುವ ಸೂತ್ರವನ್ನು ನೀಡಿದ್ದಾನೆ. ಈ ನಿಟ್ಟಿನಲ್ಲಿ ವಿವಿಧ ಕರ್ತವ್ಯಗಳ ಒತ್ತಡದಲ್ಲಿರುವ ಎಲ್ಲರೂ ಗೀತಾಭ್ಯಾಸವನ್ನು ತಪ್ಪದೆ ಮಾಡಬೇಕು. ಅಶಾಂತವಾದ ಮನಸ್ಸಿಗೆ ಗೀತೆಯ ಆಶ್ರಯದಿಂದ ನೆಮ್ಮದಿ ಸಿಗುತ್ತದೆ ಎಂದು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂದೇಶ ನೀಡಿದರು.

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಮತ್ತು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ, ಲೋಕಭಾಷಾ ಪ್ರಚಾರ ಸಮಿತಿ ಒರಿಸ್ಸಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಭಗವದ್ಗೀತಾ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಪುತ್ತಿಗೆ ಮಠದ ಪ್ರಧಾನ ಕಾರ್ಯದರ್ಶಿಗಳಾದ ವಿದ್ವಾನ್ ಶ್ರೀ ಪ್ರಸನ್ನ ಆಚಾರ್ಯರು ಅಟ್ಲಾಂಟಾ ನಗರದಿಂದ ಈ ಸಮ್ಮೇಳನದಲ್ಲಿ ಭಾಗವಹಿಸಿ ಶ್ರೀಪಾದರು ವಿಶ್ವದಾದ್ಯಂತ ವ್ಯಾಪಕವಾದ ಪ್ರಚಾರ ಮಾಡುತ್ತಿರುವ ಕೋಟಿ ಗೀತಾ ಲೇಖನ ಯಜ್ಞದ ಉದ್ದೇಶವನ್ನು ತಿಳಿಸಿ ಅಟ್ಲಾಂಟಾ ನಗರದಲ್ಲಿ ಶ್ರೀಪಾದರು ಸಂಕಲ್ಪಿಸಿರುವ ಭಗವದ್ಗೀತಾ ಕಾರ್ಯಕ್ರಮಗಳ ಪರಿಚಯವನ್ನು ಮಾಡಿಸಿ ಈ ಗೋಷ್ಠಿಯಲ್ಲಿ ಎಲ್ಲರನ್ನು ಅನುಗ್ರಹಿಸಲು ಭಾಗವಹಿಸಿರುವ ಶ್ರೀಪಾದರನ್ನು ಮತ್ತು ಪ್ರಬಂಧಗಳನ್ನು ಸಮರ್ಪಿಸಲು ಭಾಗವಹಿಸಿರುವ ವಿವಿಧ ರಾಷ್ಟ್ರಗಳ ವಿದ್ವಾಂಸರನ್ನು ಸ್ವಾಗತಿಸಿದರು.

ಈ ಎನ್.ಆರ್.ಐ.ಸಮ್ಮೇಳನದ ಅಧ್ಯಕ್ಷತೆಯನ್ನು ಸಾಗರೋತ್ತರ ರಾಷ್ಟ್ರಗಳಲ್ಲಿ ಪ್ರಸಿದ್ಧ ವಿದ್ವಾಂಸರಾದ ಹಾಗೂ ಶ್ರೀ ಪುತ್ತಿಗೆ ಮಠದ ಆಸ್ಥಾನ ವಿದ್ವಾಂಸರಾದ ಕೇಶವರಾವ್ ತಾಡಿಪತ್ರಿ ಅಮೇರಿಕಾ, ಹಾಗೂ ಮೀರಾ ತಾಡಿಪತ್ರಿ, ಜಿ.ವಿ.ಶ್ರೀನಿವಾಸನ್, ವಿವೇಕ್ ಶ್ರೀವತ್ಸ, ವೆಂಕಟಪ್ರಸಾದ್, ವೆಂಕಟೇಶ ಮುತಾಲಿಕ್, ಈಶಾನ್ಯ ಜೋಷಿ, ಆಸ್ಟ್ರೇಲಿಯಾದಿಂದ ಅಂಗ್ ಥಾನ್ ಮುಂತಾದವರು ವಿದ್ವತ್ಪೂರ್ಣವಾದ ಪ್ರಬಂಧಗಳನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಒಟ್ಟು ಆರು ಗೋಷ್ಠಿಗಳು ಆನ್ಲೈನ್ ಮೂಲಕ ನಡೆದವು. ಈ ಗೋಷ್ಠಿಗಳಲ್ಲಿ ಹರಿದ್ವಾರದ ಪತಂಜಲಿ ವಿಶ್ವವಿದ್ಯಾಲಯದ ವಿದ್ವಾಂಸರು, ಪಾಂಡಿಚೇರಿ ಪ್ರದೇಶದ ವಿದ್ವಾಂಸರು, ಆಂಧ್ರಪ್ರದೇಶದ ವಿದ್ವಾಂಸರು, ಅಸ್ಸಾಂ ರಾಜಸ್ಥಾನ ಹಾಗೂ ಕರ್ನಾಟಕ ಒರಿಸ್ಸಾ ರಾಜ್ಯದ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸಿದರು. ಭಾಗವಹಿಸಿದ ಪ್ರತಿಯೊಬ್ಬರೂ ಶ್ರೀಪಾದರ ಈ ಕಾರ್ಯಯೋಜನೆಗಳನ್ನು ಮುಕ್ತವಾಗಿ ಪ್ರಶಂಸಿಸಿದರು. ಡಾ. ಬಿ. ಗೋಪಾಲಾಚಾರ್ಯರು ಸ್ವಾಗತ ಭಾಷಣವನ್ನು ಮಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!