ಶಂಕರನಾರಾಯಣ, ಮಾ.31: ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಸಮೃದ್ಧಿ ಯುವಕ ಮಂಡಲ (ರಿ), ಕುಳ್ಳುಂಜೆ ಶಂಕರನಾರಾಯಣ ಹಾಗೂ ಗ್ರಾಮ ಪಂಚಾಯತ್ ಹಾಲಾಡಿ ಇವರ ಸಹಯೋಗದೊಂದಿಗೆ ಮತದಾನ ಜಾಗೃತಿ ಅಭಿಯಾನವು ಹಾಲಾಡಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು. ಯುವಕ ಮಂಡಲದ ಅಧ್ಯಕ್ಷ ಗಣೇಶ ತಲ್ಲಂಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ ಕುಮಾರ್ ಮತದಾನದ ಮೌಲ್ಯವನ್ನು ವಿವರಿಸಿ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವಕ ಮಂಡಲದ ಸದಸ್ಯರು, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಗಣೇಶ ತಲ್ಲಂಜೆ ಸ್ವಾಗತಿಸಿ, ಪೂರ್ವಾಧ್ಯಕ್ಷ ಯೋಗೀಶ ದೇವಾಡಿಗ ನಿರೂಪಿಸಿ ವಂದಿಸಿದರು.
ಸಮೃದ್ಧಿ ಯುವಕ ಮಂಡಲ: ಮತದಾನ ಜಾಗೃತಿ ಅಭಿಯಾನ

ಸಮೃದ್ಧಿ ಯುವಕ ಮಂಡಲ: ಮತದಾನ ಜಾಗೃತಿ ಅಭಿಯಾನ
Date: