ಉಡುಪಿ: ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ (ಎಂಐಟಿ) ಸಂಶೋಧನಾ ವಿದ್ಯಾರ್ಥಿ ಪ್ರವೀಣ್ ಕುಮಾರ್ ರೆಡ್ಡಿ ಅವರು ಮಂಡಿಸಿರುವ ‘ತ್ಯಾಜ್ಯ ನೀರಿನಲ್ಲಿ ಕಂಡುಬಂದ ಔಷಧೀಯ ರಾಸಾಯನಿಕಗಳು ಔಷಧ ನಿರೋಧಕ ಬ್ಯಾಕ್ಟೀರಿಯಾಗಳು ಹಾಗೂ ಅದರ ನಿರ್ಮೂಲನೆಗೆ ತ್ಯಾಜ್ಯ ಸಂಸ್ಕರಣ ಕೇಂದ್ರಗಳ ಪರಿಣಾಮತ್ವ’ ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಮಾಹೆ ವಿ.ವಿ ಡಾಕ್ಟರೇಟ್ ಪದವಿ ನೀಡಿದೆ.
ಇವರು ಎಂಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಕೆ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಹಾಗೂ ಕಸ್ತೂರ್ಬಾ ಕಾಲೇಜಿನ ಸೂಕ್ಷ್ಮ ಜೀವಾಣು ವಿಭಾಗದ ಮುಖ್ಯಸ್ಥೆ ಡಾ. ವಂದನ ಕೆ.ಇ ಅವರ ಸಹ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ.
ಇವರು ಪ್ರಸ್ತುತ ಮಂಗಳೂರಿನ ಬೈಕಂಪಾಡಿಯ ಪರಿಸರ ಸಂಬಂಧಿ ಸಮಸ್ಯೆಗಳ ನಿರ್ವಹಣೆ ಸಂಸ್ಥೆ ‘ಆಪಾವನಿ’ ಯಲ್ಲಿ ಸಂಶೋಧನಾ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕರ್ನೂಲಿನ (ನಂದ್ಯಾಳ) ಬಾಲಸುಂದರ ರೆಡ್ಡಿ ಮತ್ತು ಅನಿತಾ ದಂಪತಿ ಪುತ್ರ.
Congratulations PRaveen Sir.