ಕೋಟ, ಮಾ.24: ಇಲ್ಲಿನ ಕೋಟತಟ್ಟು ಪಡುಕರೆಯ ಶ್ರೀ ಶಿರಸಿ ಮಾರಿಕಾಂಬಾ ದೇಗುಲದ ವಾರ್ಷಿಕ ವರ್ಧಂತ್ಯುತ್ಸವ ಹಾಗೂ ಬ್ರಹ್ಮಕಲಶಾಭಿಷೇಕ ಮಹಾ ಅನ್ನಸಂತರ್ಪಣಾ ಕಾರ್ಯಕ್ರಮ ಶನಿವಾರ ನಡೆಯಿತು. ಆ ಪ್ರಯುಕ್ತ ಮಹಾಪೂಜೆ, ಪ್ರಸಾದ ವಿತರಣೆ, ವಿವಿಧ ಧಾರ್ಮಿಕ ವಿಧಿವಿಧಾನಗಳು ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ಸಂಪನ್ನಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಂಜೆ 6 ರಿಂದ ತಿರುಪತಿ ದಾಸ ಸಾಹಿತ್ಯ ತಂಡ ಹಾಗೂ ಶಿರಸಿ ಮಾರಿಕಾಂಬಾ ಭಜನಾ ಮಂಡಳಿ ಕೋಟತಟ್ಟು ಪಡುಕರೆ, ಪಂಚವರ್ಣದ ಮಹಿಳಾ ಮಂಡಲ ಭಜನಾ ತಂಡದಿಂದ ಭಜನಾ ಸಂಕೀರ್ತನೆ, ರಾತ್ರಿ 8.30 ರಿಂದ ಸಮಷ್ಠಿ ಮ್ಯೂಸಿಕ್ ಇವರಿಂದ ಸಾಂಸ್ಕೃತಿಕ ರಸಸಂಜೆ, ರಾತ್ರಿ 9.30 ಕ್ಕೆ ಕುಂದಾಪುರ ಪ್ರಸಿದ್ಧ ನಾಟಕ ತಂಡ (ಕುಳ್ಳಪ್ಪು) ರೂಪಕಲಾ ಇವರಿಂದ ನಾಟಕ ಇನ್ಸ್ ಪೆಕ್ಟರ್ ಅಣ್ಣಪ್ಪ ಪ್ರದರ್ಶನಗೊಂಡಿತು.
ದೇಗುಲದ ಅರ್ಚಕ ನೆಂದ್ಯಪ್ಪ ಪೂಜಾರಿ, ದೇಗುಲದ ಆಧ್ಯಕ್ಷ ರಮೇಶ್ ಪೂಜಾರಿ, ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ್, ಕೋಶಾಧಿಕಾರಿ ಕೆ.ನಾಗಪ್ಪ ಪೂಜಾರಿ, ಉಪಾಧ್ಯಕ್ಷರಾದ ಚಂದ್ರ ಪುತ್ರನ್, ಚಂದ್ರ ಪುತ್ರನ್ ಬಾರ್ಕೂರು, ಗೌರವ ಸಲಹೆಗಾರ ಸಂಜೀವ ಆರ್ ಕುಂದರ್, ಬಸವ ಕುಂದರ್, ಸಿದ್ಧಿ ಶ್ರೀನಿವಾಸ ಪೂಜಾರಿ, ಚಂದ್ರ ಮೆಂಡನ್, ಬಾಬು ಪೂಜಾರಿ, ಅಶೋಕ್ ಪೂಜಾರಿ, ಉದಯ್ ತಿಂಗಳಾಯ, ಪ್ರಕಾಶ್ ತಿಂಗಳಾಯ, ರಘು ಪೂಜಾರಿ, ಅಣ್ಣಪ್ಪ ತಿಂಗಳಾಯ, ಸುಧಾಕರ್ ಶ್ರೀಯಾನ್, ಯೋಗೇಂದ್ರ ತಿಂಗಳಾಯ, ಪ್ರಭಾಕರ್ ತಿಂಗಳಾಯ, ಆನಂದ್ ಪೂಜಾರಿ, ರಘು ಪೂಜಾರಿ, ಕೃಷ್ಣ ಪುತ್ರನ್, ಲೆಕ್ಕ ಪರಿಶೋಧಕರಾದ ಶಿವಮೂರ್ತಿ ಕೆ., ವಿಠ್ಠಲ ಪೂಜಾರಿ ಮತ್ತಿತರರು ಇದ್ದರು.