ಕೋಟ, ಮಾ.24: ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಮಂಜುನಾಥ ಉಪಾಧ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಕೀಯರ ದಾಳಿಯಿಂದ ನಮ್ಮ ಸಂಸ್ಕೃತಿ, ಸ್ವಾಭಿಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸ್ವಾತಂತ್ರ್ಯ ಪೂರ್ವದಲ್ಲೆ ಭಾರತೀಯರ ಮೇಲೆ ಅದರಲ್ಲೂ ಇಲ್ಲಿನ ಮಹಿಳೆಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಿದೆ. ನಾರಿಶಕ್ತಿ ವಿಜೃಂಭಿಸುವ ಕಾಲ ಇಂದು ಕಾಣುತ್ತಿದ್ದೇವೆ, ಅಸಮಾನತೆ ತೊಡೆದು ಹಾಕಿ ಸ್ವಾವಲಂಬಿ ಬದುಕಿಗೆ ಮಹಿಳೆ ಮುನ್ನುಡಿ ಬರೆಯುತ್ತಿದ್ದಾಳೆ. ಪುರುಷ ಪ್ರದಾನವಾದ ಈ ಸಮಾಜದಲ್ಲಿ ಮಹಿಳೆ ಕೂಡಾ ಸಮಾನವಾಗಿ ನಿಂತು ವಿವಿಧ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾಳೆ, ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಗಾಯತ್ರಿ ಹೊಳ್ಳ ವಹಿಸಿದ್ದರು. ಮಣೂರು ಮಹಾಲಕ್ಷ್ಮಿ ಉರಾಳ ಇವರನ್ನು ವಿಪ್ರ ಮಹಿಳಾ ಬಳಗದ ಭಾಗ್ಯ ವಾದಿರಾಜ್ ಸನ್ಮಾನಿಸಿದರು. ಮುಖ್ಯ ಅತಿಥಿಯಾಗಿ ತೆಕ್ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶಾರದಾ ಹೊಳ್ಳ ಸ್ವಾವಲಂಬಿ ಬದುಕಿನ ಬಗ್ಗೆ ಮಾತನಾಡಿದರು. ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಮಂಜುನಾಥ ಉಪಾಧ್ಯ ಶುಭ ಹಾರೈಸಿದರು. ಸದಸ್ಯೆ ಸ್ಮಿತಾರಾಣಿ ವರದಿ ವಾಚಿಸಿದರು. ವಿಪ್ರ ಮಹಿಳಾ ಬಳಗದ ಮಾಜಿ ಅಧ್ಯಕ್ಷೆ ಜ್ಞಾನವಿ ಹೇರ್ಳೆ ಸ್ವಾಗತಿಸಿ, ಅತಿಥಿಗಳನ್ನು ಭಾರತಿ ಮಯ್ಯ ಪರಿಚಯಿಸಿದರು. ನರ್ಮದಾ ಹೇರ್ಳೆ ಸನ್ಮಾನ ಪತ್ರ ವಾಚಿಸಿದರು. ವಿಪ್ರ ಮಹಿಳಾ ಬಳಗದ ಸದಸ್ಯೆ ಸುಮನ ಹೇರ್ಳೇ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಸುಜಾತ ಬಾಯರಿ ವಂದಿಸಿದರು. ಸಂಚಾಲಕಿ ವನಿತಾ ಉಪಾಧ್ಯಾ ಕಾರ್ಯಕ್ರಮ ಸಂಯೋಜಿಸಿದರು.
ವಿಪ್ರ ಮಹಿಳಾ ಬಳಗ: ವಿಶ್ವ ಮಹಿಳಾ ದಿನಾಚರಣೆ
ವಿಪ್ರ ಮಹಿಳಾ ಬಳಗ: ವಿಶ್ವ ಮಹಿಳಾ ದಿನಾಚರಣೆ
Date: