Monday, January 20, 2025
Monday, January 20, 2025

ಲೋಕಸಭಾ ಚುನಾವಣೆ ಹಿನ್ನೆಲೆ: ಮದ್ಯ ಮಾರಾಟ ನಿಷೇಧ

ಲೋಕಸಭಾ ಚುನಾವಣೆ ಹಿನ್ನೆಲೆ: ಮದ್ಯ ಮಾರಾಟ ನಿಷೇಧ

Date:

ಉಡುಪಿ, ಮಾ.22: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆ, ಜಿಲ್ಲೆಯಲ್ಲಿ ಏಪ್ರಿಲ್ 26 ರಂದು ಮತದಾನ ಹಾಗೂ ಜೂನ್ 4 ರಂದು ಮತ ಎಣಿಕೆ ನಡೆಸಲು ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಕರ್ನಾಟಕ ಅಬಕಾರಿ ಕಾಯ್ದೆ ಸಾಮಾನ್ಯ ನಿಯಮಾವಳಿ 1967 ಕಲಂ 10(ಬಿ) ರಂತೆ ಹಾಗೂ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ರ ಕಲಂ135(ಸಿ) ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಏಪ್ರಿಲ್ 24 ರ ಸಂಜೆ 5 ಗಂಟೆಯಿಂದ ಏಪ್ರಿಲ್ 26 ರ ಮಧ್ಯರಾತ್ರಿ 12 ರ ವರೆಗೆ ಹಾಗೂ ಜೂನ್ 3 ರಂದು ಮಧ್ಯರಾತ್ರಿ 12 ಗಂಟೆಯಿಂದ ಜೂ. 4 ರ ಮಧ್ಯರಾತ್ರಿ 12 ರ ವರೆಗೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಿಲರಿಗಳನ್ನು. ಸ್ಟಾರ್ ಹೋಟೆಲ್‌ಗಳನ್ನು, ಶೇಂದಿ ಅಂಗಡಿಗಳನ್ನು ಹಾಗೂ ಕ್ಲಬ್‌ಗಳನ್ನು ಮುಚ್ಚಲು ಆದೇಶಿಸಿ, ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!