ಉಡುಪಿ, ಮಾ.14: ಮಲ್ಪೆ ಪಡುಕರೆ ಭಾಗದ ಯುವಕರ ಬಹು ವರ್ಷಗಳ ಬೇಡಿಕೆಯಾಗಿದ್ದ ಪಡುಕರೆ ಭಾಗದಲ್ಲಿ ವ್ಯವಸ್ಥಿತ ಕ್ರೀಡಾ ಮೈದಾನ ನಿರ್ಮಿಸುವಂತೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯರ ಮನವಿಯಂತೆ ಶಾಂತಿ ನಗರದಲ್ಲಿ ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕ್ರೀಡಾ ಮೈದಾನವನ್ನು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಉದ್ಘಾಟಿಸಿ ಕ್ರೀಡಾ ಪ್ರತಿಭೆಗಳ ಚಟುವಟಿಕೆಗೆ ಮೈದಾನ ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಎಡ್ಲಿನ್ ಕರ್ಕಡ, ನಾಗರಾಜ್ ಸುವರ್ಣ, ವಿನಯ ಕರ್ಕೇರ, ಸುಧಾಕರ ಕುಂದರ್, ಗ್ರಾಮ ಪಂಚಾಯತ್ ಸದಸ್ಯರಾದ ವಸಂತ, ಪ್ರವೀಣ್ ಮೆಂಡನ್, ಪ್ರಮೋದ್ ಸಾಲ್ಯಾನ್, ವೇದಾವತಿ, ಮಾಜಿ ನಗರಸಭಾ ಸದಸ್ಯರಾದ ವಿಜಯ ಕುಂದರ್, ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಅಶೋಕ್, ಪ್ರಮುಖರಾದ ಭುವನ್ ಪಡುಕರೆ ಹಾಗೂ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.