ಕಿನ್ನಿಮೂಲ್ಕಿ, ಮಾ.9: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ರೂ. 2.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಬ್ರಹ್ಮಗಿರಿ ಜಂಕ್ಷನ್ ರಸ್ತೆ, ವಿವೇಕಾನಂದ ರಸ್ತೆ ಹಾಗೂ 10 ಲಕ್ಷ ವೆಚ್ಚದಲ್ಲಿ ಶ್ರೀ ವ್ಯಾಘ್ರ ಚಾಮುಂಡಿ ಗಡುವಾಡು ಕ್ಷೇತ್ರದ ಮೇಲ್ಛಾವಣಿಯ ಉದ್ಘಾಟನೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೆರವೇರಿಸಿದರು.
ನಗರಸಭಾ ಸದಸ್ಯರಾದ ಅಮೃತ ಕೃಷ್ಣಮೂರ್ತಿ ಆಚಾರ್ಯ, ರಶ್ಮಿ ಸಿ. ಭಟ್, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಭಗವಾನ್ ದಾಸ್, ದೇವದಾಸ್ ಶೆಟ್ಟಿಗಾರ್, ಆನಂದ ಕಾರ್ನಾಡ್, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು, ಆಡಳಿತ ಸಮಿತಿ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.