Thursday, February 27, 2025
Thursday, February 27, 2025

ತೆಂಕನಿಡಿಯೂರು ಕಾಲೇಜು: ಸೈಬರ್ ಕ್ರೈಂ ಮಾಹಿತಿ ಕಾರ್ಯಕ್ರಮ

ತೆಂಕನಿಡಿಯೂರು ಕಾಲೇಜು: ಸೈಬರ್ ಕ್ರೈಂ ಮಾಹಿತಿ ಕಾರ್ಯಕ್ರಮ

Date:

ಉಡುಪಿ, ಮಾ.6: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ಯೂತ್ ರೆಡ್‌ಕ್ರಾಸ್, ಐಕ್ಯೂಎಸಿ ಹಾಗೂ ಯುವವಾಹಿನಿ ಉಡುಪಿ ಘಟಕದ ಜಂಟಿ ಆಶ್ರಯದಲ್ಲಿ ಸಂಘಟಿಸಿದ ಸೈಬರ್ ಕ್ರೈಂ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉಡುಪಿ ಲೋಕಾಯುಕ್ತ ಇನ್ಸ್ಫೆಕ್ಟರ್ ಮಂಜುನಾಥ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವ ಯುವಜನತೆ ಸೈಬರ್ ಕಾನೂನುಗಳನ್ನು ಸರಿಯಾಗಿ ಅರಿಯುವ ಅವಶ್ಯಕತೆಯಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅಪಾಯ ಎದುರಿಸಬೇಕಾದೀತೆಂಬ ಎಚ್ಚರಿಕೆಯ ಸೂಚನೆಯನ್ನು ನೀಡಿದರು. ವ್ಯಕ್ತಿತ್ವದಲ್ಲಿ ಒಮ್ಮೆ ಅಂಟಿದ ಕಳಂಕದಿಂದ ಹೊರಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಯುವಜನತೆ ಮನರಂಜನೆಯ ಜೊತೆ ಎಚ್ಚರಿಕೆಯಿಂದ ಇರಲು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಶೋಕಿ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣವನ್ನು ಸುದುದ್ದೇಶಗಳಿಗೆ ಮಾತ್ರ ಬಳಸಿಕೊಳ್ಳಲು ಕರೆನೀಡುತ್ತಾ ಮಾದಕ ದ್ರವ್ಯದ ಅಪಾಯಗಳ ಕುರಿತಾಗಿಯೂ ಮಾಹಿತಿ ನೀಡಿ ಎಷ್ಟೇ ಕಷ್ಟ ಬಂದರೂ ಬದುಕಿನಲ್ಲಿ ಮಾದಕ ವ್ಯಸನಿಗಳಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು. ಜೊತೆಗೆ ರಸ್ತೆ ಸುರಕ್ಷತೆಯ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ವಿದ್ಯಾರ್ಥಿಗಳು ಆದಷ್ಟು ಏಕಾಗ್ರತೆಯಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾರ್ಗದರ್ಶಿಸಿದರು. ಮುಖ್ಯ ಅತಿಥಿಯಾಗಿ ಯುವವಾಹಿನಿ ಅಧ್ಯಕ್ಷರಾದ ಅಮೃತಾಂಜಲಿ ಕಿರಣ್ ಶುಭ ಹಾರೈಸಿದರು. ಯೂತ್ ರೆಡ್‌ಕ್ರಾಸ್ ಸಂಚಾಲಕ ಪ್ರಶಾಂತ್ ನೀಲಾವರ ಕಾರ್ಯಕ್ರಮದ ಔಚಿತ್ಯ ತಿಳಿಸುವುದರ ಜೊತೆಗೆ ಅತಿಥಿಗಳನ್ನು ಸ್ವಾಗತಿಸಿದರು. ಯುವವಾಹಿನಿಯ ದಯಾನಂದ ಉಗ್ಗೇಲ್‌ಬೆಟ್ಟು, ರಘುನಾಥ್ ಮಾಬಿಯಾನ್, ಭಾಸ್ಕರ ಸುವರ್ಣ, ಕಾಲೇಜಿನ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ರವಿ, ಸುಮತಿ ಬಿಲ್ಲವ, ಡಾ. ಮಮತಾಶ್ರೀ, ಪ್ರಭಾಕರ ಮಾರಾಳಿ ಇನ್ನಿತರರು ಉಪಸ್ಥಿತರಿದ್ದರು. ಮಹೇಶ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

51 ವಯಸ್ಸಿನಲ್ಲೂ ಸ್ಪೋಟಕ ಆಟ; ಗತ ವೈಭವ ನೆನಪಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್

ಮುಂಬಯಿ, ಫೆ.26: ಮಂಗಳವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ...

ಮಹಾಕುಂಭ ವೈಭವ- 45 ದಿನಗಳಲ್ಲಿ 65 ಕೋಟಿಗೂ ಹೆಚ್ಚು ಭಕ್ತರು, 3 ಲಕ್ಷ ಕೋಟಿ ರೂ. ಆದಾಯ

ಪ್ರಯಾಗರಾಜ್, ಫೆ.26: ಬುಧವಾರ ಮಹಾಶಿವರಾತ್ರಿಯಂದು ಸಂಪನ್ನಗೊಂಡ ಮಹಾಕುಂಭಮೇಳ ಕಳೆದ 45 ದಿನಗಳಲ್ಲಿ...

ಜೆಇಇ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಫಲಿತಾಂಶ: ಕ್ರಿಯೇಟಿವ್ ಸಾಧನೆ

ಉಡುಪಿ, ಫೆ.26: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್.ಟಿ.ಎ) ವತಿಯಿಂದ ನಡೆಸಲಾದ ಜೆಇಇ...

ಪರೀಕ್ಷಾ ತರಬೇತಿ

ಕುಂದಾಪುರ, ಫೆ.26: ಜೆಸಿಐ ಶಂಕರನಾರಾಯಣ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ...
error: Content is protected !!