Tuesday, February 25, 2025
Tuesday, February 25, 2025

ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ

ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ

Date:

ಉಡುಪಿ, ಮಾ.5: ಕೇಂದ್ರ ಸರಕಾರದ ನೂತನ ಮತ್ತು ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಸೂರ್ಯ ಘರ್ ಮನೆಯ ಮೇಲ್ಛಾವಣೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಪಡೆಯುವುದಾಗಿದೆ. ಯಾರ ಮನೆಗೆ ಸೋಲಾರ್ ವಿದ್ಯುತ್ ಬೆಳಕು ಬೇಕೋ ಅವರು ಹತ್ತಿರದ ಅಂಚೆ ಕಚೇರಿಯಲ್ಲಿ ತಿಳಿಸಿದರೆ ಅವರು ಆ ಮನೆಯ ಸರ್ವೇ ಮಾಡಿ, ವಿದ್ಯುತ್ ಕಂಪನಿಗೆ ತಿಳಿಸುತ್ತಾರೆ. ನಂತರ ವಿದ್ಯುತ್ ಕಂಪನಿಯವರು ಆ ಮನೆಗೆ ಸೋಲಾರ್ ಪ್ಯಾನಲ್ ಜೋಡಿಸುತ್ತಾರೆ. ಒಂದು ಕಿಲೋ ವ್ಯಾಟ್ ನಿಂದ ಹತ್ತು ಕಿಲೋ ವ್ಯಾಟ್ ನವರೆಗೆ ಸೋಲಾರ್ ಅಳವಡಿಸಿಕೊಳ್ಳಬಹುದು. ಈ ಯೋಜನೆಯ ಫಲಾನುಭವಿಗಳಿಗೆ ಸರಕಾರವು ರೂ. 30000-78000 ವರೆಗೆ ಸಹಾಯಧನ ನೀಡುವುದಲ್ಲದೇ, ವಾರ್ಷಿಕವಾಗಿ ಪ್ರತಿ ಮನೆಗೆ ರೂ. 15000 ಉಳಿತಾಯದ ಲಾಭ ಸಿಗಲಿದೆ. 7% ಬಡ್ಡಿ ದರದಲ್ಲಿ ಸಾಲದ ಸೌಲಭ್ಯವೂ ಈ ಯೋಜನೆಯಲ್ಲಿದೆ. ನೊಂದಾವಣೆಗೆ ಸಾರ್ವಜನಿಕರು ಹತ್ತಿರದ ಅಂಚೆ ಕಛೇರಿಯನ್ನು ಅಥವಾ ಮನೆ ಬಾಗಿಲಿಗೆ ಬರುವ ಅಂಚೆಯಣ್ಣನನ್ನು ಕೂಡಲೆ ಸಂಪರ್ಕಿಸಿ ಈ ಯೋಜನೆಗೆ ಮೊಬೈಲ್ ಆಪ್ ಮೂಲಕ ನೊಂದಣಿ ಮಾಡಿಸಿಕೊಳ್ಳಬೇಕಾಗಿ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೊಂದಣಿಗೆ ಕೊನೆಯ ದಿನ ಮಾರ್ಚ್ 8 2024.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!