ಕಟಪಾಡಿ, ಮಾ.4: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯ ಪದವಿ ಕಾಲೇಜಿನಲ್ಲಿ ಒಂದು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪ್ರೀತಿ ಕೀರ್ತಿ ಡಿಸೋಜ ಇವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಕೌಶಲ್ಯ ಬೆಳೆಸಿಕ್ಕೊಳ್ಳುವ ಬಗೆ, ಗುರುಹಿರಿಯರನ್ನು ಗೌರವಿಸುವ ಬಗೆ, ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸ ಬೆಳೆಸಿಕೊಂಡು ಬರುವ ಸವಾಲುಗಳನ್ನು ಎದುರಿಸಿ, ಒಳ್ಳೆಯ ಕೆಲಸ ಪಡೆದುಕ್ಕೊಳ್ಳುವುದು ಹಾಗೂ ಜೀವನದಲ್ಲಿ ಯಶಸ್ಸು ಗಳಿಸುವ ಬಗೆಯನ್ನು ಹಲವಾರು ಚಟುವಟಿಕೆಗಳನ್ನು ನಡೆಸುವ ಮೂಲಕ ವಿಸ್ತಾರವಾಗಿ ವಿವರಿಸಿದರು. ಪದವಿ ಕಾಲೇಜು ಸಂಯೋಜಕಿ ರಕ್ಷಿತಾ, ಕಾರ್ಯಕ್ರಮ ಸಂಯೋಜಕಿ ಅನುಸೂಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಮ್ಯಾ ಸ್ವಾಗತಿಸಿ, ಕೀರ್ತಿಕಾ ವಂದಿಸಿ, ಶ್ರೀನಿಧಿ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು.
ಪಾಜಕ ಶ್ರೀ ವಿಶ್ವೇಶತೀರ್ಥ ಪದವಿ ಕಾಲೇಜು: ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

ಪಾಜಕ ಶ್ರೀ ವಿಶ್ವೇಶತೀರ್ಥ ಪದವಿ ಕಾಲೇಜು: ಕೌಶಲ್ಯಾಭಿವೃದ್ಧಿ ಕಾರ್ಯಾಗಾರ
Date: