ಮಣಿಪಾಲ, ಮಾ.4: ಜೆಸಿಐ ಉಡುಪಿ ಸಿಟಿ ವತಿಯಿಂದ ‘ಸಲ್ಯೂಟ್ ದ ಸೈಲೆಂಟ್ ಸ್ಟಾರ್’ ಕಾರ್ಯಕ್ರಮ ಮಣಿಪಾಲ ಅನಂತನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು. ಸ್ವಯಂಪ್ರೇರಿತ ರಕ್ತದಾನಿ ಕಾಲೇಜಿನ ಪ್ರಾಧ್ಯಾಪಕರಾದ ಶಿವಪ್ರಸಾದ್ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಕ್ತದಾನದ ಮಹತ್ವವನ್ನು ವಿವರಿಸುತ್ತಾ, ಸ್ವಯಂಪ್ರೇರಣೆಯಿಂದ ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಜೆಸಿಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷರಾದ ಪೂರ್ಣಿಮಾ ಸುರೇಶ್ ಜೆಸಿಐ ಸಂಸ್ಥೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಜಯ ಎಲ್ ಮೋಯ್ಲಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭಾಧ್ಯಕ್ಷತೆಯನ್ನು ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ ವಹಿಸಿದ್ದರು. ಜೆಸಿಐ ಉಡುಪಿ ಸಿಟಿಯ ಲೇಡಿ ಜೇಸಿ ಸಂಯೋಜಕಿ ನಯನ ಉದಯ್ ನಾಯ್ಕ್ ಹಾಗೂ ನಿಕಟಪೂರ್ವ ಅಧ್ಯಕ್ಷ ಕಿರಣ್ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಸಂದೀಪ್ ಕುಮಾರ್ ಮಂಜ, ಜೆಸಿಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷರುಗಳಾದ ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್ , ಕಾರ್ಯದರ್ಶಿ ಸಂಧ್ಯಾ ವಿ ಕುಂದರ್, ಗುರುಪ್ರಸಾದ್, ಸುನಿಲ್, ನಿಶಾ ದೇವಾಡಿಗ, ಉಷಾ ಕುಮಾರಿ, ಅವಿನಾಶ್, ಅಭಿಷೇಕ್ , ಕಾಲೇಜಿನ ಬೋಧಕ ಬೋಧಕೇತರರು ಹಾಗೂ ವಿದ್ಯಾರ್ಥಿಗಳಿದ್ದರು.