ಉಡುಪಿ, ಫೆ.15: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಅಂಗವಾಗಿ ಫೆಬ್ರವರಿ 28 ರಂದು ನಗರದ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಹಿಳೆಯರ ವಿಭಾಗದಲ್ಲಿ 21 ವರ್ಷ ಮೇಲ್ಪಟ್ಟವರಿಗೆ ವಾಲಿಬಾಲ್, ತ್ರೋ ಬಾಲ್, 12ರಿಂದ 15 ವರ್ಷದ ಬಾಲಕಿಯರಿಗೆ 100ಮೀ, 200 ಮೀ ಓಟ ಹಾಗೂ ಉದ್ದ ಜಿಗಿತ, 12ರಿಂದ 15 ವರ್ಷದ ಬಾಲಕರಿಗೆ 400 ಮೀ.ಓಟ, ಎತ್ತರ ಜಿಗಿತ ಹಾಗೂ ಈಟಿ ಎಸೆತ, 16 ರಿಂದ 20 ವರ್ಷದ ಬಾಲಕಿಯರಿಗೆ 100 ಮೀ, 200 ಮೀ ಓಟ, ಉದ್ದ ಜಿಗಿತ, ಹಾಗೂ 16 ರಿಂದ 20 ವರ್ಷದ ಬಾಲಕರಿಗೆ 400 ಮೀ ಓಟ, ಎತ್ತರ ಜಿಗಿತ ಹಾಗೂ ಈಟಿ ಎಸೆತ ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಪದಕ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಸ್ಪರ್ಧೆಗಳಿಗೆ ಹೆಸರನ್ನು ನೋಂದಾಯಿಕೊಳ್ಳಲು ಫೆಬ್ರವರಿ 24 ಕೊನೆಯ ದಿನವಾಗಿದ್ದು, ನಗರದ ಮಣಿಪಾಲ ರಜತಾದ್ರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಹೆಸರನ್ನು ನೋಂದಾಯಿಕೊಳ್ಳಬಹುದಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಫೆ.28: ಅಜ್ಜರಕಾಡು ಕ್ರೀಡಾಂಗಣದಲ್ಲಿ ಆಟೋಟ ಸ್ಪರ್ಧೆ

ಫೆ.28: ಅಜ್ಜರಕಾಡು ಕ್ರೀಡಾಂಗಣದಲ್ಲಿ ಆಟೋಟ ಸ್ಪರ್ಧೆ
Date: