ಕೋಟ, ಫೆ.15: ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ ಅವರ ಆಶ್ರಯದಲ್ಲಿ ನಡೆದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಸಾಂಸ್ಕೃತಿಕ ಸ್ಪರ್ಧೆ ಹೊಳಪು-2024 (ಗ್ರಾಮ ಸರಕಾರದ ದಿಬ್ಬಣ) ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಥ ಸಂಚಲನದಲ್ಲಿ ಪ್ರಥಮ ಕಾಪು ಪುರಸಭೆ, ದ್ವಿತೀಯ ಯಡ್ತಾಡಿ ಗ್ರಾಮ ಪಂಚಾಯತ್ ತೃತೀಯ ಕೋಟ ಗ್ರಾಮ ಪಂಚಾಯತ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಸಮಾಧಾನಕರ ಬಹುಮಾನದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್, ಕೋಟತಟ್ಟು ಗ್ರಾಮ ಪಂಚಾಯತ್, ತೆಕ್ಕಟ್ಟೆ ಗ್ರಾಮ ಪಂಚಾಯತ್, ಆರೂರು ಗ್ರಾಮ ಪಂಚಾಯತ್, ಬಿಲ್ಲಾಡಿ ಗ್ರಾಮ ಪಂಚಾಯತ್, ಕುತ್ಯಾರು ಗ್ರಾಮ ಪಂಚಾಯತ್, ವಡ್ಡರ್ಸೆ ಗ್ರಾಮ ಪಂಚಾಯತ್, ಕುಂದಾಪುರ ಪುರಸಭೆ, ಕುಕ್ಕಂದೂರು ಗ್ರಾಮ ಪಂಚಾಯತ್, ಗೋಪಾಡಿ ಗ್ರಾಮ ಪಂಚಾಯತ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಪ್ರಶಸ್ತಿ ಪಡೆದುಕೊಂಡಿತು. ಟ್ಯಾಬ್ಲೋ ವಿಭಾಗದಲ್ಲಿ ಹೊಂಬಾಡಿ ಮುಂಡಾಡಿ ಗ್ರಾಮ ಪಂಚಾಯತ್ ಪ್ರಥಮ, ಆರೂರು ಗ್ರಾಮ ಪಂಚಾಯತ್ ದ್ವೀತಿಯ, ನಾರಾವಿ ಗ್ರಾಮ ಪಂಚಾಯತ್ ತೃತೀಯ ಸ್ಥಾನ ಪಡೆದವು.
ಹೊಳಪು 2024: ಉಪ್ಪಿನಂಗಡಿ ಗ್ರಾಮ ಪಂಚಾಯತ್ ಚಾಂಪಿಯನ್
ಹೊಳಪು 2024: ಉಪ್ಪಿನಂಗಡಿ ಗ್ರಾಮ ಪಂಚಾಯತ್ ಚಾಂಪಿಯನ್
Date: