Saturday, October 26, 2024
Saturday, October 26, 2024

ಉಡುಪಿಯ ಡಾ.ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ನರರೋಗ ಶಾಸ್ತ್ರ ಕ್ಲಿನಿಕ್ ಆರಂಭ

ಉಡುಪಿಯ ಡಾ.ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ನರರೋಗ ಶಾಸ್ತ್ರ ಕ್ಲಿನಿಕ್ ಆರಂಭ

Date:

ಉಡುಪಿ, ಫೆ.13: ಡಾ. ಟಿ.ಎಂ.ಎ. ಪೈ ಆಸ್ಪತ್ರೆಯು ನರರೋಗ ಶಾಸ್ತ್ರ ಕ್ಲಿನಿಕ್ ಅನ್ನು ಪರಿಚಯಿಸುವ ಮೂಲಕ ತನ್ನ ವೈದ್ಯಕೀಯ ಸೇವೆಗಳನ್ನು ಹೆಚ್ಚಿಸಲು ಸಜ್ಜಾಗಿದೆ. ಈ ಕ್ಲಿನಿಕ್ ಹೊರರೋಗಿಗಳ ಸಮಾಲೋಚನೆಗಾಗಿ ಫೆಬ್ರವರಿ 16 ರಿಂದ ಪ್ರಾರಂಭವಾಗಲಿದೆ. ಖ್ಯಾತ ನರರೋಗ ತಜ್ಞ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲದ ಸಹ ಪ್ರಾಧ್ಯಾಪಕ ಡಾ. ನಿಕಿತ್ ಅಂಪಾರ್ ಪ್ರತಿ ಶುಕ್ರವಾರ ಮಧ್ಯಾಹ್ನ 12:30 ರಿಂದ ಸಂಜೆ 4:00 ರವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ. ಈ ರೋಗ ಲಕ್ಷಣಗಳಿರುವ ರೋಗಿಗಳು ನರರೋಗ ಶಾಸ್ತ್ರ ತಜ್ಞರನ್ನು ಭೇಟಿ ಮಾಡಬಹುದು. ಪಾರ್ಶ್ವವಾಯು, ಪಾರ್ಕಿನ್ಸನ್ ಮತ್ತು ಚಲನೆ-ಸಂಬಂಧಿತ ಅಸ್ವಸ್ಥತೆಗಳು, ಮೈಗ್ರೇನ್ (ತೀವ್ರ ತಲೆ ನೋವು) ಮತ್ತು ಇತರ ತಲೆನೋವು ಅಸ್ವಸ್ಥತೆಗಳು, ಮರೆವಿನ ತೊಂದರೆ (ಮೆಮೊರಿ ಲಾಸ್), ಮೆದುಳಿನ ಸೋಂಕುಗಳು, ಮಲ್ಟಿಪಲ್ ಸ್ಕ್ಲೆರೋಸಿಸ್ ಹಾಗೂ ಇನ್ನಿತರ ಯಾವುದೇ ನರರೋಗ ಸಮಸ್ಯೆಗಳು.

ಡಾ.ಟಿಎಂಎ ಪೈ ಆಸ್ಪತ್ರೆ, ಉಡುಪಿಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ಮಾತನಾಡಿ, ನಮ್ಮ ವೈದ್ಯಕೀಯ ಪರಿಣಿತರ ತಂಡಕ್ಕೆ ಡಾ. ನಿಕಿತ್ ಅಂಪಾರ್ ಅವರನ್ನು ಸ್ವಾಗತಿಸಲು ನಮಗೆ ತುಂಬಾ ಸಂತೋಷವಾಗಿದೆ. ನರರೋಗ ತಜ್ಞರ ಸೇರ್ಪಡೆಯಿಂದಾಗಿ ಉಡುಪಿಯ ಜನರಿಗೆ ಸೂಕ್ತಕಾಲದಲ್ಲಿ ರೋಗನಿರ್ಣಯದೊಂದಿಗೆ ಗುಣಮಟ್ಟದ ವೈದ್ಯಕೀಯ ಆರೈಕೆ ಸಮುದಾಯಕ್ಕೆ ತಲುಪಿಸುವ ನಮ್ಮ ಬದ್ಧತೆಗೆ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದ್ದಾರೆ. ಸಮಾಲೋಚನೆಯನ್ನು ಕಾಯ್ದಿರಿಸಲು (ಅಪಾಯಿಂಟ್‌ಮೆಂಟ್ ನಿಗದಿಪಡಿಸಲು) ಅಥವಾ ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಫೋನ್ ಸಂಖ್ಯೆ 7259032864 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೆ.ಎಂ.ಸಿ. ಮಣಿಪಾಲ: ಜಾಗೃತಿ ನಡಿಗೆ

ಮಣಿಪಾಲ, ಅ.26: ಪ್ರತಿವರ್ಷ ಅಕ್ಟೋಬರ್‌ನ ಎರಡನೇ ಶನಿವಾರದಂದು, ಉಪಶಾಮಕ ಆರೈಕೆ ಅಗತ್ಯಗಳೊಂದಿಗೆ...

ಹಂಗಾರಕಟ್ಟೆ ಕಲಾಕೇಂದ್ರ ವಿದ್ಯಾರ್ಥಿಗಳ ಸಮಾವೇಶ

ಕೋಟ, ಅ.26: ಐವತ್ತು ವರ್ಷದ ಇತಿಹಾಸವಿರುವ ಗುಂಡ್ಮಿಯ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ,...

ಸ್ನಾತಕೋತ್ತರ ಪದವಿಯ ಸಂಶೋಧನಾ ಮಾರ್ಗದರ್ಶಿಗಳ ಕ್ಷಮತೆ ವೃದ್ಧಿ ರಾಷ್ಟ್ರೀಯ ಕಾರ‍್ಯಗಾರ

ಮೂಡುಬಿದಿರೆ, ಅ.26: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಭಾರತೀಯ ಔಷಧ...

ರೈತರುಗಳು ಕೃಷಿ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು, ಪಡೆದು ಸಮರ್ಪಕವಾಗಿ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಅ.26: ಕೃಷಿ ಕ್ಷೇತ್ರಕ್ಕೆ ಪ್ರಾಧ್ಯಾನ್ಯತೆ ನೀಡುವುದರೊಂದಿಗೆ, ಕೃಷಿ ವಲಯಕ್ಕೆ ಸಂಬಂಧಿಸಿದ...
error: Content is protected !!