ಉಡುಪಿ, ಫೆ. 6: ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಸುಗುಣಶ್ರೀ ಭಜನಾ ಮಂಡಳಿ ಮಣಿಪಾಲ ಹಾಗೂ ರತ್ನಸಂಜೀವ ಕಲಾಮಂಡಲ ಸರಳೇಬೆಟ್ಟು ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಮತ್ತು ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರ ಪರಮಾನುಗ್ರಹದಿಂದ ಫೆಬ್ರವರಿ 9 ರಂದು ಮಧ್ಯಾಹ್ನ 3 ಗಂಟೆಯಿಂದ ದಾಸಶ್ರೇಷ್ಠರಾದ ಶ್ರೀ ಪುರಂದರ ದಾಸರ ಆರಾಧನೆಯ ಅಂಗವಾಗಿ ‘ಶತಕಂಠ ಗಾಯನ’ ಕಾರ್ಯಕ್ರಮ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ರಾಜಾಂಗಣದಲ್ಲಿ 100ಕ್ಕೂ ಮಿಕ್ಕಿ ಗಾಯಕರು ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಸಂಚಾಲಕಿ ವಿದುಷಿ ಉಷಾ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ. 9: ರಾಜಾಂಗಣದಲ್ಲಿ ಶತಕಂಠ ಗಾಯನ

ಫೆ. 9: ರಾಜಾಂಗಣದಲ್ಲಿ ಶತಕಂಠ ಗಾಯನ
Date: