ಉಡುಪಿ, ಫೆ.2: ಉಪಧನ ಪಾವತಿ ಕಾಯಿದೆ 1972ರ ಕಲಂ -4ಎ(2) ನಿಯಮ 5 ರನ್ವಯ ಉಪಧನ ಪಾವತಿ ಕಾಯಿದೆ 1972ರ ವ್ಯಾಪ್ತಿಗೆ ಬರುವ ಸಂಸ್ಥೆಗಳು ಕರ್ನಾಟಕ ಕಡ್ಡಾಯ ವಿಮಾ ನಿಯಮ 2024ರನ್ವಯ ಎಲ್ಲಾ ಹೊಸ ಸಂಸ್ಥೆಗಳು ಪ್ರಾರಂಭವಾದ 30 ದಿವಸದೊಳಗೆ ಉದ್ದಿಮೆಯ ಮಾಲೀಕರು ಕಡ್ಡಾಯವಾಗಿ ವಿಮಾ ಪಾಲಿಸಿಯನ್ನು ಉಪಧನ ಪಾವತಿ ಸಂಬಂಧ ಪಡೆದುಕೊಂಡು ಹಾಗೂ ಈಗಾಲೇ ಚಾಲ್ತಿಯಲ್ಲಿರುವ ಸಂಸ್ಥೆಗಳ ಮಾಲೀಕರು ಈ ನಿಯಮ ಜಾರಿಗೆ ಬಂದ 60 ದಿವಸದೊಳಗೆ ಉದ್ದಿಮೆಯ ಮಾಲೀಕರು ಕಡ್ಡಾಯವಾಗಿ ವಿಮಾ ಪಾಲಿಸಿಯನ್ನು ಉಪಧನ ಪಾವತಿ ಸಂಬಂಧ ಪಡೆದುಕೊಂಡು ಅಲ್ಲದೇ ಈಗಾಗಲೇ ಅಂತಹ ಪಾಲಿಸಿಗಳನ್ನು ಪಡೆದುಕೊಂಡಿರುವ ಸಂಸ್ಥೆಗಳ ಮಾಲೀಕರು ಅದನ್ನು ಮುಂದುವರೆಸಿಕೊಂಡು ಪಾಲಿಸಿ ನವೀಕರಿಸಿ ಮಾಹಿತಿಯನ್ನು ನಮೂನೆ-2ರಲ್ಲಿ ಸಲ್ಲಿಸಬೇಕಾಗಿರುತ್ತದೆ ಅಲ್ಲದೇ ನಮೂನೆ-1 ರಲ್ಲಿ ಮಾಹಿತಿ ಒದಗಿಸಿ ಉಪಧನ ಪಾವತಿಕಾಯಿದೆ.
1972 ರಡಿ ನೇಮಕಗೊಂಡ ನಿಯಂತ್ರಣಾಧಿಕಾರಿಗಳಲ್ಲಿ ನೋಂದಣಿ ಮಾಡಿಸುವುದು ಹಾಗೂ ಕಲಂ-4ಎ(2) ಓದಿಕೊಂಡ ನಿಯಮ-11 ರ ಪ್ರಕಾರ ಅರ್ಹರಾದ ಎಲ್ಲಾ ಕಾರ್ಮಿಕರ/ನೌಕರರ ಮಾಹಿತಿಯನ್ನು ನಮೂನೆ-3 ರಲ್ಲಿ ಕಾಯಿದೆಯಡಿ ನೇಮಕಗೊಂಡ ನಿಯಂತ್ರಣಾಧಿಕಾರಿಗಳಿಗೆ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ, ಉಡುಪಿ ಉಪವಿಭಾಗ, ಉಡುಪಿ, ರಜತಾದ್ರಿ, ಮಣಿಪಾಲ, ಇವರ ಕಛೇರಿಯನ್ನು ಸಂಪರ್ಕಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉಪವಿಭಾಗ, ಕಾರ್ಮಿಕ ಅಧಿಕಾರಿ, ಕಛೇರಿ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಮಿಕ ಕಛೇರಿ ಪ್ರಕಟಣೆ ತಿಳಿಸಿದೆ.