ಕಾರ್ಕಳ, ಫೆ.1: ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜು ಗಣಿತನಗರ ಇಲ್ಲಿನ ಯಕ್ಷೋತ್ಕರ್ಷ ಯಕ್ಷಗಾನ ಕೇಂದ್ರವು 9 ವರ್ಷಗಳಿಂದ ನಿರಂತರವಾಗಿ ಯಕ್ಷಗಾನ, ತಾಳಮದ್ದಳೆ ನಡೆಸಿಕೊಂಡು ಬರುತ್ತಿದ್ದು ಈ ಬಾರಿ ಫೆಬ್ರವರಿ 2 ಸಂಜೆ 5.45ಕ್ಕೆ ಗಣಿತನಗರದ ಜ್ಞಾನಸುಧಾ ಸಭಾಂಗಣದಲ್ಲಿ ‘ಸುದರ್ಶನೋಪಖ್ಯಾನ’ ಎಂಬ ಪೌರಾಣಿಕ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ.
ಗುರು ಆನಂದ ಗುಡಿಗಾರ್ ನಿರ್ದೇಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳನ್ನೊಳಗೊಂಡ ತಂಡವು ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಕಲೆ ಯಕ್ಷಗಾನವನ್ನು ಅಭ್ಯಾಸ ಮಾಡಿ ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ. ಆಸಕ್ತ ಯಕ್ಷಾಭಿಮಾನಿಗಳು, ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.