ಕುಂದಾಪುರ, ಜ.29: ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ ಮತ್ತು ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಕೋಟೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ‘ಅಪ್ಪಣ್ಣ ಹೆಗ್ಡೆ ಜೀವಮಾನ ಸಾಧನಾ ಪ್ರಶಸ್ತಿ-2024’ ಪ್ರಶಸ್ತಿಯನ್ನು ‘ಸಂಜೆ ಪ್ರಭ’ ಪತ್ರಿಕೆಯ ಸಂಪಾದಕರಾದ ವೆಂಕಟೇಶ್ ಪೈಯವರಿಗೆ ನೀಡಿ ಆಶೀರ್ವದಿಸಿದರು. ಎಸ್.ಸತೀಶ್ ಕುಮಾರ್, ಆನಂದ ಬಿಳಿಯಾರ, ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಗುಲಾಬಿಯಮ್ಮ, ಕೆ.ಆರ್.ನಾಯಕ್, ಗಣೇಶ ಶೆಟ್ಟಿ, ರಮೇಶ್ ಎಚ್.ಎಸ್., ಮಂಜುನಾಥ್ ಕುಂದರ್, ಗಣಪತಿ. ಟಿ ಶ್ರೀಯಾನ್ ಮುಂತಾದವರು ಉಪಸ್ಥಿತರಿದ್ದರು.
ವೆಂಕಟೇಶ್ ಪೈಯವರಿಗೆ ಅಪ್ಪಣ್ಣ ಹೆಗ್ಡೆ ಜೀವಮಾನ ಸಾಧನಾ ಪ್ರಶಸ್ತಿ

ವೆಂಕಟೇಶ್ ಪೈಯವರಿಗೆ ಅಪ್ಪಣ್ಣ ಹೆಗ್ಡೆ ಜೀವಮಾನ ಸಾಧನಾ ಪ್ರಶಸ್ತಿ
Date: