ಕಾಪು, ಜ. 28: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಸಮಗ್ರ ಗ್ರಾಮೀಣ ಆಶ್ರಮ, ಪೆರ್ನಾಲು ಇವರ ಸಹಯೋಗದೊಂದಿಗೆ ಪೆರ್ನಾಲು ಆದಿವಾಸಿ ಶಿಕ್ಷಣ ಕೇಂದ್ರದಲ್ಲಿ ಕೊರಗ ಮಹಿಳೆಯರ ಡೋಲು ಬಡಿತ-ಕುಣಿತ ಕಲಾತಂಡ ಮಹಿಳೆಯರಿಗಾಗಿ ಡೋಲು ಬಡಿಯುವ ಮತ್ತು ಡೋಲು ಕುಣಿತದ ತರಬೇತಿ ಕಾರ್ಯಕ್ರಮ ನಡೆಯಿತು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲಾ ನಾಡ, ಕಾರ್ಯದರ್ಶಿ ವಿನಯ ಅಡ್ವೆ, ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಬಿತಾ ಗುಂಡ್ಮಿ, ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ಸರಿತಾ ಹಾಗೂ ಕೊರಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಕೊರಗ ಮಹಿಳೆಯರ ಡೋಲು ಕುಣಿತದ ತರಬೇತಿ ಕಾರ್ಯಕ್ರಮ

ಕೊರಗ ಮಹಿಳೆಯರ ಡೋಲು ಕುಣಿತದ ತರಬೇತಿ ಕಾರ್ಯಕ್ರಮ
Date: