Wednesday, January 22, 2025
Wednesday, January 22, 2025

ಜನಪದ- ದೇಶೀಯ ಕಲೆಯ ಸರಣಿ ಕಾರ್ಯಾಗಾರ

ಜನಪದ- ದೇಶೀಯ ಕಲೆಯ ಸರಣಿ ಕಾರ್ಯಾಗಾರ

Date:

ಉಡುಪಿ, ಜ.24: ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಿರಿಯಡ್ಕದ ಸಂಸ್ಕೃತಿ ಸಿರಿ ಟ್ರಸ್ಟ್ ಹಾಗೂ ಆಭರಣ ಜುವೆಲ್ಲರ್ಸ್ ಸಹಯೋಗದಲ್ಲಿ ಆಯೋಜಿಸುವ ಜನಪದ ಸರಣಿ ಕಲಾ ಕಾರ್ಯಾಗಾರದ ಒಂಭತ್ತು ಮತ್ತು ಹತ್ತನೇ ಆವೃತ್ತಿಯು 27 ನೇ ಜನವರಿ ಶನಿವಾರದಂದು ಅಪರಾಹ್ನ 2 ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡಕ ಇವರಿಂದ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಈಶಾವಾಸ್ಯ ಪ್ರತಿಷ್ಠಾನದ ವ್ವಿಶ್ವಸ್ಥರಾದ ವಿನಯ್ ಬನ್ನಂಜೆ ಹಾಗೂ ಮಂಗಳೂರಿನ ಆರ್ಕಿಟೆಕ್ಟ್ ಪ್ರಮುಖ್ ರೈಯವರು ಭಾಗವಹಿಸಲಿದ್ದು ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್‌ರವರು ಉಪಸ್ಥಿತರಿರಲಿದ್ದಾರೆ.

ಈ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಮೈಸೂರು ಹಾಗೂ ಗಂಜೀಫಾ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಯುವ ಕಲಾವಿದರಾದ ಶಶಾಂಕ್ ಭಾರಧ್ವಾಜ್ ರವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. 27ನೇ ಶನಿವಾರ ಹಾಗೂ 28ನೇ ಭಾನುವಾರ ಮೈಸೂರು ಚಿತ್ರಶೈಲಿ ಹಾಗೂ ೨೯ನೇ ಸೋಮವಾರ ಗಂಜೀಫಾ ಕಲೆಯ ಕಾರ್ಯಾಗಾರವು ಬಡಗುಪೇಟೆಯ ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಗಿಲ್ಡೆಡ್ ಡಿವೈನಿಟಿ’ ಎನ್ನುವ ಶೀರ್ಷಿಕೆಯಡಿಯಲ್ಲಿ ಶಾಶಾಂಕ್ ಭಾರಧ್ವಾವ್‌ರವರ ಕಲಾಕೃತಿಗಳ ಕಲಾ ಪ್ರದರ್ಶನವು ಅನಾವರಣಗೊಳ್ಳಲಿದೆ. ಕಲಾಪ್ರದರ್ಶನದಲ್ಲಿ ಭಾರತೀಯ ಸಾಂಪ್ರದಾಯಿಕ ಮೈಸೂರು ಕಲಾಶೈಲಿಯಲ್ಲಿ ಅರಳಿರುವ ಕೃಷ್ಣ, ಶ್ರೀರಾಮ, ವಿಟ್ಠಲ, ವಿಷ್ಣು, ಲಕ್ಷ್ಮೀ, ಗಣೇಶ ಮೊದಲಾದ ಹದಿನೈದು ಕಲಾಕೃತಿಗಳು ಪ್ರದರ್ಶನದಲ್ಲಿರಲಿದ್ದು, ೩೦ನೇ ಜನವರಿಯ ತನಕ ಅಪರಾಹ್ನ ೩ರಿಂದ ೭ರವರೆಗೆ ಬಡಗುಪೇಟೆಯ ಗ್ಯಾಲರಿಯಲ್ಲಿ ಸಾರ್ವಜನಿಕ ವೀಕ್ಷಣೆಗೆ ತೆರೆದಿರಲಿದೆ. ಹೆಚ್ಚಿನ ಮಾಹಿತಿ ಮತ್ತು ಕಾರ್ಯಾಗಾರದ ನೋಂದಣಿಗಾಗಿ ಡಾ. ಜನಾರ್ದನ ಹಾವಂಜೆ 9845650544 ರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!