Monday, January 20, 2025
Monday, January 20, 2025

ಬ್ರಹ್ಮಾವರ ರುಡ್ ಸೆಟ್- ಉಚಿತ ಟಿ.ವಿ ರಿಪೇರಿ ಮತ್ತು ಇಲೆಕ್ಟ್ರಿಕಲ್ ಮೋಟಾರು ರೀವೈಡಿಂಗ್ ತರಬೇತಿ

ಬ್ರಹ್ಮಾವರ ರುಡ್ ಸೆಟ್- ಉಚಿತ ಟಿ.ವಿ ರಿಪೇರಿ ಮತ್ತು ಇಲೆಕ್ಟ್ರಿಕಲ್ ಮೋಟಾರು ರೀವೈಡಿಂಗ್ ತರಬೇತಿ

Date:

ಉಡುಪಿ, ಜ.8: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ನ ಸಹಯೋಗದೊಂದಿಗೆ ನಡೆಯುತ್ತಿರುವ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್ ನೊಂದಿಗೆ ಸಂಪೂರ್ಣ ಉಚಿತ ಟಿ.ವಿ ರಿಪೇರಿ ಮತ್ತು ಇಲೆಕ್ಟ್ರಿಕಲ್ ಮೋಟಾರು ರೀವೈಡಿಂಗ್ ತರಬೇತಿ 5.02.2024 ರಿಂದ 5.03.2024ರ ವರೆಗೆ 30 ದಿನಗಳ ನಡೆಯಲಿದೆ. ಈ ತರಬೇತಿಗೆ ಹೆಚ್ಚು ಬೇಡಿಕೆ ಇದ್ದು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಲಿದೆ.
ಈ ತರಬೇತಿಯಲ್ಲಿ ಟಿ.ವಿ ರಿಪೇರಿ ಮತ್ತು ಇಲೆಕ್ಟ್ರಿಕಲ್ ಮೋಟಾರು ರೀವೈಡಿಂಗ್ ಮಾಡಿ ಅದರ ವ್ಯವಹಾರ ನಡೆಸಲು ಬೇಕಾದ ಮಾರುಕಟ್ಟೆ ನಡೆಸುವ ಬಗ್ಗೆ, ಬ್ಯಾಂಕಿನ ವ್ಯವಹಾರ, ಸರಕಾರಿ ಯೋಜನೆಗಳ ಬಗ್ಗೆ, ಯೋಜನಾ ವರದಿ ತಯಾರಿಸುವ ಬಗ್ಗೆ, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ಸಮಸ್ಯೆ ಬಗೆಹರಿಸುವ ಬಗ್ಗೆ, ಅವಲಂಬನೆ ಇಲ್ಲದೆ ವ್ಯವಹಾರಿಸುವ ಬಗ್ಗೆ, ರಿಸ್ಕ್ ತೆಗೆದುಕೊಳ್ಳವ ರೀತಿಗಳ ಬಗ್ಗೆ, ಗುಣಮಟ್ಟದ ನಿರ್ವಹಣೆ ಬಗ್ಗೆ ಮುಂತಾದ ವಿಷಯಗಳ ಬಗ್ಗೆ ವಿಶೇಷವಾದ ತರಬೇತಿ ನೀಡಲಾಗುವುದು.

ಈ ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 45 ವರ್ಷದ ಒಳಗಿನವರು, ಬಿ.ಪಿ.ಎಲ್ ಕುಟುಂಬದ ಸದಸ್ಯರಾಗಿ ಇರಬೇಕು, ಕನ್ನಡ ಓದಲು ಬರೆಯಲು ಬರುವ ಮುಂದೇ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು ನಿಮ್ಮ ಹೆಸರು, ವಿಳಾಸ, ನಿಮ್ಮ ಮೊಬೈಲ್ ನಂ. ಜನ್ಮ ದಿನಾಂಕ ಬರೆದು ನೀವು ಪಡೆಯಲು ಇಚ್ಚಿಸುವ ತರಬೇತಿಯ ಯಾವುದೆಂದು ಬರೆದು, ನಿಮ್ಮ ಹೆಸರು ಇರುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇರಿಸಿ ತಕ್ಷಣ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ವಾಟ್ಸಪ್ ನಂ. ಕಳುಹಿಸಿ ಕೊಡಬಹುದು 7022560492, 9900889234, 9449862808, 9632561145, 9844086383, 9591233748, 9448348569, 8861325564.

ಅರ್ಜಿಯನ್ನು ಗೂಗಲ್ ಫಾರಂ ಮೂಲಕ ಸಲ್ಲಿಸಬಹುದು https://forms.gle/bx6cTfjocm3cS3oB7 ನಮ್ಮ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು http://WWW.rudsetitraining.org ನಮ್ಮ ಇಮೇಲ್ ವಿಳಾಸ : [email protected] ಈ ಕೆಳಗಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸಬಹುದು ಎಂದು ರುಡ್ ಸೆಟ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!