Saturday, October 19, 2024
Saturday, October 19, 2024

ಉಡುಪಿಗೆ ಬನ್ನಿ ಅರ್ಪಿಸುವ ಉಡುಪಿ ಜಿಲ್ಲಾ ಮಟ್ಟದ ರೀಲ್ಸ್ ಸ್ಪರ್ಧೆ

ಉಡುಪಿಗೆ ಬನ್ನಿ ಅರ್ಪಿಸುವ ಉಡುಪಿ ಜಿಲ್ಲಾ ಮಟ್ಟದ ರೀಲ್ಸ್ ಸ್ಪರ್ಧೆ

Date:

ಉಡುಪಿ, ಜ.6: ಉಡುಪಿ ಜಿಲ್ಲೆಯ ಪ್ರವಾಸೋದ್ಯಮ, ಆಹಾರ, ಕೃಷಿ ಮತ್ತು ಇನ್ನಿತರ ಸಂಬಂಧಿತ ವಿಚಾರಗಳನ್ನು ಮನೆಮನೆಗೆ ಮುಟ್ಟಿಸಲು ಶ್ರಮಿಸುತ್ತಿರುವ ಉಡುಪಿಗೆ ಬನ್ನಿ ಇದೀಗ ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಮೊಟ್ಟಮೊದಲ ಬಾರಿಗೆ ಉಡುಪಿ ಜಿಲ್ಲಾ ಮಟ್ಟದ ರೀಲ್ಸ್ ಸ್ಪರ್ಧೆ ಆಯೋಜಿಸುತ್ತಿದೆ. ಈ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ ಇರುವುದಿಲ್ಲ. ಸ್ಪರ್ಧೆ ಸಂಪೂರ್ಣ ಉಚಿತವಾಗಿದ್ದು ಯಾವುದೇ ನೊಂದಣಿ ಶುಲ್ಕ ಇರುವುದಿಲ್ಲ.

ಸ್ಪರ್ಧೆಯ ನಿಯಮಗಳು:

1. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಉಡುಪಿಗೆ ಬನ್ನಿ (ಫೇಸ್‌ಬುಕ್‌ ಪೇಜ್) Facebook page Follow ಮಾಡಬೇಕು. ಅದೇ ರೀತಿ Instagram ನಲ್ಲಿ ಕೂಡ ಉಡುಪಿಗೆ ಬನ್ನಿ Follow ಮಾಡಬೇಕು. ಎರಡನ್ನೂ Follow ಮಾಡಿದ Screenshot Instagram ನಲ್ಲಿ ಉಡುಪಿಗೆ ಬನ್ನಿ ಗೆ ಮೆಸೇಜ್ ಕಳುಹಿಸಬೇಕು

2. ಉಡುಪಿ ಜಿಲ್ಲೆಯ ಪ್ರವಾಸಿ ಸ್ಥಳಗಳು/ ಕೃಷಿ / ಜಾತ್ರೆ ಬಗ್ಗೆ ರೀಲ್ಸ್ (ಕೇವಲ 1 ನಿಮಿಷಗಳಿಗೆ ಸೀಮಿತವಾಗಿರಬೇಕು) ನಿಮ್ಮ Instagram ನಲ್ಲಿ ಪ್ರಕಟಿಸಿ ಉಡುಪಿಗೆ ಬನ್ನಿ ಇದಕ್ಕೆ Invite Collaborator ನೀಡುವ ಮೂಲಕ ಹ್ಯಾಷ್ ಟ್ಯಾಗ್ ನಲ್ಲಿ #UdupigeBanniReelsContest ಟೈಪ್ ಮಾಡಬೇಕು.

3. ಅತ್ಯಧಿಕ ಲೈಕ್ / Like ಪರಿಗಣಿಸಲಾಗುತ್ತದೆ. ಆದರೆ ಅತ್ಯಧಿಕ ಲೈಕ್ಸ್ ಮಾತ್ರ ಮಾನದಂಡ ಅಲ್ಲ. ರೀಲ್ಸ್ ಕೂಡ ಪರಿಣಾಮಕಾರಿಯಾಗಿರಬೇಕು.

4. ಹಿನ್ನೆಲೆಗೆ ಸಂಬಂಧಿಸಿದಂತೆ Instagram ನಲ್ಲಿ ಇರುವ ಯಾವುದಾದರೂ ಸಂಗೀತ ಅಳವಡಿಸಬಹುದು.

5. ಒಬ್ಬರಿಗೆ ಒಂದೇ ಬಾರಿ ರೀಲ್ಸ್ collaborate ಮಾಡುವ ಅವಕಾಶ. ಒಂದಕ್ಕಿಂತ ಹೆಚ್ಚು ರೀಲ್ಸ್ ಪರಿಗಣಿಸುವುದಿಲ್ಲ.

6. ರೀಲ್ಸ್ ಗೆ ಸಂಬಂಧಿಸಿದ ವಿಚಾರಗಳನ್ನು caption ಅಥವಾ comment ವಿಭಾಗದಲ್ಲಿ ಪ್ರಕಟಿಸಬೇಕು. ಯಾವುದೇ ಶೀರ್ಷಿಕೆ ಇಲ್ಲದ ರೀಲ್ಸ್ ಪರಿಗಣಿಸುವುದಿಲ್ಲ.

7. ತೀರ್ಪುಗಾರರ ತೀರ್ಮಾನವೇ ಅಂತಿಮ.

8. ಉಡುಪಿ ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಅವಕಾಶ.

9. ಜನವರಿ 25, 2024 ರೀಲ್ಸ್ collaborate ಮಾಡಲು ಕೊನೆಯ ದಿನ.

10. ಸ್ಪರ್ಧೆಯ ಬಗ್ಗೆ ನಿರಂತರ updates ಉಡುಪಿಗೆ ಬನ್ನಿ Facebook ಮತ್ತು Instagram ನಲ್ಲಿ ಪ್ರಕಟಿಸಲಾಗುವುದು.

ಬಹುಮಾನಗಳ ವಿವರ:

ಪ್ರಥಮ ಬಹುಮಾನ- ರೂ. 3000/- (Three Thousand Only) + ಪ್ರಶಸ್ತಿ ಪತ್ರ+ ಟ್ರೋಫಿ

ದ್ವಿತೀಯ ಬಹುಮಾನ- ರೂ.‌2000/- (Two Thousand only) + ಪ್ರಶಸ್ತಿ ಪತ್ರ + ಟ್ರೋಫಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!