ಉಡುಪಿ, ಜ.5: ಜಮ್ಮು ಕಾಶ್ಮೀರ ಸರಕಾರದ ಮುಖ್ಯ ಕಾರ್ಯದರ್ಶಿ ಹಿರಿಯಡ್ಕ ಕೊಂಡಾಡಿ ಮೂಲದ ಎಚ್. ರಾಜೇಶ್ ಪ್ರಸಾದ್ ಐ.ಎ.ಎಸ್ ಇವರು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿ ಫಲ ಮಂತ್ರಾಕ್ಷತೆ ಆಶೀರ್ವಾದವನ್ನು ಪಡೆದುಕೊಂಡರು. ಪ್ರಸ್ತುತ ಜಮ್ಮು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ ಪೇಜಾವರ ಶ್ರೀಪಾದರು, ಮೂಲ ಶಾರದಾ ಪೀಠದ ಬಗ್ಗೆ ಮಾಹಿತಿ ಪಡೆದುಕೊಂಡರು.
ವಿಶ್ವಶಾಂತಿಗಾಗಿ ಶ್ರಮಿಸುತ್ತಿರುವ ತಾವು ಜಮ್ಮು ಸರಕಾರದೊಂದಿಗೆ ಸ್ಪಂದಿಸಲು ಸಿದ್ಧ ಎನ್ನುವ ವಿಚಾರ ತಿಳಿಸಿದರು. ಶ್ರೀ ಕ್ಷೇತ್ರ ಪೆರ್ಣಂಕಿಲದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್, ಪದಾಧಿಕಾರಿಗಳಾದ ಉಮೇಶ್ ನಾಯಕ್ ಪೆರ್ಣಂಕಿಲ, ಸತೀಶ್ ನಾಯಕ್ ದಂಡೆಮಠ ಉಪಸ್ಥಿತರಿದ್ದರು