Sunday, January 19, 2025
Sunday, January 19, 2025

ಜ.14: ಕೊಡವೂರಿನಲ್ಲಿ ವಾಲ್ ಪೈಂಟಿಂಗ್ ಸ್ಪರ್ಧೆ

ಜ.14: ಕೊಡವೂರಿನಲ್ಲಿ ವಾಲ್ ಪೈಂಟಿಂಗ್ ಸ್ಪರ್ಧೆ

Date:

ಕೊಡವೂರು, ಜ.2: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ಸ್ನೇಹಿತ ಯುವ ಸಂಘ ಕಾನಂಗಿ ಕೊಡವೂರು ಜಂಟಿ ಆಶ್ರಯದಲ್ಲಿ ನಗರಸಭಾ ಸದಸ್ಯರಾದ ಕೆ. ವಿಜಯ್ ಕೊಡವೂರು ಸಂಯೋಜನೆಯಲ್ಲಿ ಚಂದ್ರಚಿತ್ರ ಕಡೆಕಾರ್ ಮಾರ್ಗದರ್ಶನದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಶ್ರೀ ರಾಮ ದೇವರ ಜೀವನ ಚರಿತ್ರೆಯ ವಾಲ್ ಪೈಂಟಿಂಗ್ ಸ್ಪರ್ಧೆ ಜ.14 ರಂದು ಬೆಳಿಗ್ಗೆ 8 ಗಂಟೆಯಿಂದ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಪರಿಸರದಲ್ಲಿ ನಡೆಯಲಿದೆ.

ಬಹುಮಾನಗಳ ವಿವರ: ಪ್ರಥಮ ಬಹುಮಾನ ರೂ.10,000 ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ ರೂ. 5,000 ಮತ್ತು ಪ್ರಮಾಣ ಪತ್ರ, ತೃತೀಯ ಬಹುಮಾನ ರೂ. 3,000 ಮತ್ತು ಪ್ರಮಾಣ ಪತ್ರ. 5 ಜನರಿಗೆ ತಲಾ ರೂ.1000 ಪ್ರೋತ್ಸಾಹಕ ಬಹುಮಾನ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.

ಸೂಚನೆಗಳು: ಸಾರ್ವಜನಕ ವಿಭಾಗದಲ್ಲಿ ನುರಿತ ಚಿತ್ರ ಕಲಾವಿದರಿಗೆ ಮಾತ್ರ ಅವಕಾಶ, ಚಿತ್ರ ಬಿಡಿಸಲು 5.00 ಗಂಟೆಯ ಸಮಯವಕಾಶ, ತೈಲವರ್ಣ ಜಲವರ್ಣದಲ್ಲಿ ಯಾವುದೇ ರೀತಿಯ ಉಪಕರಣ ಬಳಸಿ ಚಿತ್ರ ಬಿಡಿಸಬಹುದು, Minimum colour ನೀಡಲಾಗುವುದು, ಪರಿಕರವನ್ನು ತಾವೇ ತರಬೇಕು, ಸಂಘಟಕರ ತೀರ್ಮಾನವೇ ಅಂತಿಮ ತೀರ್ಮಾನ. ಹೆಚ್ಚಿನ ಮಾಹಿತಿಗಾಗಿ 7760770271 8660984279 ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!