ಉಡುಪಿ, ಡಿ.31: ಇತಿಹಾಸ ಪ್ರಸಿದ್ದ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮಂಡಲ ಪೂಜಾ ಮಹೋತ್ಸವವು ಜನವರಿ 3 ರಂದು ಬುಧವಾರ ಶ್ರೀ ಕ್ಷೇತ್ರದಲ್ಲಿ ನಡೆಲಿದೆ. ಜನವರಿ 2 ರಂದು ಮಂಗಳವಾರ ಸಂಜೆ 4 ರಿಂದ ಬೆಳ್ಮಣ್ಣು ಅಯ್ಯಪ್ಪ ಭಕ್ತವೃಂದದ ಶಿಬಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಲಿದೆ. ಜನವರಿ 3 ರಂದು ಬುಧವಾರ ಬೆಳಿಗ್ಗೆ ಘಂಟೆ 5.30ಕ್ಕೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ ಬೆಳಿಗ್ಗೆ ಘಂಟೆ 6.30ಕ್ಕೆ ಅಲಂಕಾರ ಪೂಜೆ, ಬೆಳಿಗ್ಗೆ ಘಂಟೆ 7 ರಿಂದ ತುಲಾಭಾರ ಸೇವೆ, ಬೆಳಿಗ್ಗೆ ಘಂಟೆ 11.30ಕ್ಕೆ ಮಹಾಪೂಜೆ, ಮಧ್ಯಾಹ್ನ ಘಂಟೆ 12 ಕ್ಕೆ ಮಂಡಲ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ, ಮಧ್ಯಾಹ್ನ ಘಂಟೆ 1.00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 3 ರಿಂದ ಮಾಯಾಮೃಗ (ರಾಮಾಯಣ) ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ, ಸಂಜೆ 6 ರಿಂದ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾರ್ಕಳ ಯೋಗೀಶ್ ಕಿಣಿ ಮತ್ತು ಬಳಗದವರಿಂದ ‘ಭಕ್ತಿ ಭಾವ ಸಂಗಮ’ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಘಂಟೆ 7 ರಿಂದ ಪ್ರಸನ್ನ ಪೂಜೆ, ಉತ್ಸವ ಬಲಿ ಹಾಗೂ ರಂಗಪೂಜೆ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ. 3: ಬೆಳ್ಮಣ್ಣು ಮಂಡಲ ಪೂಜಾ ಮಹೋತ್ಸವ
ಜ. 3: ಬೆಳ್ಮಣ್ಣು ಮಂಡಲ ಪೂಜಾ ಮಹೋತ್ಸವ
Date: