ಸಿದ್ಧಾಪುರ, ಡಿ.23: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಜ್ರಿ ಮಾನಂಜೆ ಕಮಲಶಿಲೆ ಇಲ್ಲಿ ಚಿತ್ರಕಲಾ ಮಂದಿರ ಕಲಾಶಾಲೆ ಜಂಗಮಮಠ, ಉಡುಪಿ ಮತ್ತು ಚಿತ್ತಾರ ಹಳ್ಳಿಹೊಳೆ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 20 ರಿಂದ 23 ರವರೆಗೆ ಬಿತ್ತಿ ಚಿತ್ರ ಕಾರ್ಯಗಾರ ನಡೆಯಿತು. ಸಾಂಪ್ರದಾಯಿಕ ವಾರ್ಲಿ ಚಿತ್ರ ಕಲೆಯ ಮೂಲಕ ಕಂಬಳ, ರಥೋತ್ಸವ, ಕೋಲ, ದೇವರ ಕುಣಿತ, ಯಕ್ಷಗಾನ, ಮಕ್ಕಳ ಆಟ, ಜಂಭೂ ಸವಾರಿ ಮುಂತಾದ ಚಿತ್ರಗಳಿಂದ ಗೋಡೆಗೆ ಮೆರುಗು ನೀಡಲಾಗಿದೆ.
ಕಾರ್ಯಗಾರದಲ್ಲಿ 15 ಮಂದಿ ಕಲಾವಿದರಿದ್ದರು. ವಾರ್ಲಿ ಸಂಸ್ಕೃತಿಯು ತಾಯಿಯ ಪ್ರಕೃತಿಯ ಪರಿಕಲ್ಪನೆಯ ಮೇಲೆ ಕೇಂದ್ರೀಕೃತವಾಗಿದೆ ಮತ್ತು ಪ್ರಕೃತಿಯ ಅಂಶಗಳನ್ನು ಹೆಚ್ಚಾಗಿ ವಾರ್ಲಿ ಚಿತ್ರಕಲೆಯಲ್ಲಿ ಚಿತ್ರಿಸಲಾಗಿದೆ.