ಉಡುಪಿ, ಡಿ.19: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಲಯ-1 ರ ಪರವಾನಿಗೆ ಹೊಂದಿರುವ ಆಟೋ ಚಾಲಕರು ಆಟೋ ಸ್ಟ್ಯಾಂಡಿನಲ್ಲಿ ನಿಲ್ಲಿಸಿ, ಬಾಡಿಗೆ ಮಾಡಿದರೆ ಆ ಸ್ಟ್ಯಾಂಡಿನ ಚಾಲಕರು ದಬ್ಬಾಳಿಕೆ ಮಾಡುತ್ತಿರುವುದಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗೆ ಸಾಕಷ್ಟು ದೂರುಗಳು ಬಂದಿರುತ್ತವೆ. ಸಾರಿಗೆ ಪ್ರಾಧಿಕಾರದಿಂದ ಪರವಾನಿಗೆ ನೀಡುವ ಸಂದರ್ಭದಲ್ಲಿ ಆಟೋರಿಕ್ಷಾಗಳನ್ನು ನಿರ್ದಿಷ್ಟ ನಿಲ್ದಾಣದಲ್ಲಿ ನಿಲುಗಡೆ ಮಾಡುವ ಕುರಿತು ಯಾವುದೇ ಷರತ್ತನ್ನು ವಿಧಿಸಿರುವುದಿಲ್ಲ. ಆದುದರಿಂದ ಉಡುಪಿ ತಾಲೂಕು ವಲಯ-1 ರ ಪರವಾನಿಗೆ ಹೊಂದಿರುವ ಆಟೋ ರಿಕ್ಷಾಗಳು ನಗರದ ಯಾವುದೇ ರಿಕ್ಷಾ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದಾಗಿದ್ದು, ನಿಲುಗಡೆಗೆ ರಿಕ್ಷಾ ಚಾಲಕರು ತೊಂದರೆ ನೀಡಬಾರದು. ಇದನ್ನು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಆಟೋರಿಕ್ಷಾಗಳ ನಿಲುಗಡೆ ಕುರಿತು

ಉಡುಪಿ: ಆಟೋರಿಕ್ಷಾಗಳ ನಿಲುಗಡೆ ಕುರಿತು
Date: