ಬಾರ್ಕೂರು, ಡಿ.19: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಧಾನ್ಯಗಳ ಅಂತರಾಷ್ಟ್ರೀಯ ವರ್ಷವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸಿರಿ ಧಾನ್ಯಗಳಿಂದ ತಯಾರಿಸಿದ ಸಿಹಿ ತಿನಿಸನ್ನು ಹಂಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶೈಕ್ಷಣಿಕ ಸಮಿತಿಯ ಮುಖ್ಯ ಸಲಹೆಗಾರರಾದ ಶೋಭಾ ಆರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳ ಬಳಕೆಯ ಅಗತ್ಯವನ್ನು ಸವಿವರವಾಗಿ ವಿವರಿಸಿದರು. ಎನ್.ಸಿ.ಸಿ ಅಧಿಕಾರಿ ಸುದಿನ್ ಟಿಎ ದಿನದ ಮಹತ್ವವನ್ನು ತಿಳಿಸಿದರು. ಐಕ್ಯೂಏಸಿ ಸಂಚಾಲಕಿ ವಿದ್ಯಾ ಪಿ ಸಿರಿಧಾನ್ಯಗಳ ಉಪಯೋಗಗಳ ಬಗ್ಗೆ ಮಾತನಾಡಿದರು. ಸಿರಿಧಾನ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ಕೆಡೆಟ್ ಸಿಂಚನ ಎಸ್ ಸ್ವಾಗತಿಸಿ, ಕೆಡೆಟ್ ಪ್ರಿಯಾ ಕಾಮತ್ ವಂದಿಸಿದರು. ಕೆಡೆಟ್ ಗೌತಮ್ ಕಾರ್ಯಕ್ರಮ ನಿರೂಪಿಸಿದರು.
ಬಾರ್ಕೂರು: ಸಿರಿಧಾನ್ಯಗಳ ಅಂತರಾಷ್ಟ್ರೀಯ ವರ್ಷಾಚರಣೆ
ಬಾರ್ಕೂರು: ಸಿರಿಧಾನ್ಯಗಳ ಅಂತರಾಷ್ಟ್ರೀಯ ವರ್ಷಾಚರಣೆ
Date: