ಉಡುಪಿ, ಡಿ.17: ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಪ್ರಯುಕ್ತ, ಸ್ವಾಗತ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ರಾಮಕ್ಷತ್ರೀಯ ಸಮಾಜದೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ರಾಮಕ್ಷತ್ರೀಯ ಸಮಾಜ ಪುತ್ತಿಗೆ ಪರ್ಯಾಯದ ಪ್ರತಿ ಉಪಸಮಿತಿಯಲ್ಲಿ ಸಹಕರಿಸಬೇಕಾಗಿ ವಿನಂತಿಸಿ, ಸಮಾಜದ ಅಧಿಕೃತ ಸದಸ್ಯತ್ವವನ್ನು ಪತ್ರ ಮುಖೇನ ನೀಡಿದರು.
ಸ್ವಾಗತ ಸಮಿತಿಯ ಅಧ್ಯಕ್ಷರಾದ ಎಚ್.ಎಸ್. ಬಲ್ಲಾಳ್, ಕಾರ್ಯಾಧ್ಯಕ್ಷರಾದ ಕೆ. ರಘುಪತಿ ಭಟ್, ಮಹಾಪೋಷಕರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಸಂಚಾಲಕರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಜಯಕರ ಶೆಟ್ಟಿ ಇಂದ್ರಾಳಿ, ದಿವಾಕರ್ ಶೆಟ್ಟಿ, ಸಂತೋಷ್ ಶೆಟ್ಟಿ ತೆಂಕರಗುತ್ತು ಉಪಸ್ಥಿತರಿದ್ದರು. ಪತ್ರ ಸ್ವೀಕರಿಸಿದ ಸಮಾಜದ ರವಿ ರಾವ್, ಡಾ. ಶಿವಾನಂದ್ ನಾಯಕ್, ಜಯಕರ ಕೆ. ಕೆ.ಟಿ. ನಾಯಕ್, ಪ್ರವೀಣ್ ಕುಮಾರ್ ಗುರ್ಮೆ, ಬಾಲಗಂಗಾಧರ ತಮ್ಮ ಸಮಾಜವು ಎಲ್ಲಾ ವಿಭಾಗಗಳಲ್ಲೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ, ಸಮಾಜದ ಪ್ರತಿನಿಧಿಯಾಗಿ ಕಿಶೋರ್ ಕುಮಾರ್ ಗುರ್ಮೆ
ಯವರನ್ನು ನೇಮಿಸಲಾಯಿತು. ಸುಮಾರು 100ಕ್ಕು ಅಧಿಕ ಸಂಖ್ಯೆಯಲ್ಲಿ ರಾಮಕ್ಷತ್ರೀಯ ಸಮಾಜದ ಮಹಿಳೆಯರೂ ಸೇರಿ ಗಣ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಸಮಿತಿಯ ಸಂಚಾಲಕ ರಮೇಶ್ ಭಟ್ ಕೆ ಸ್ವಾಗತಿಸಿ ವಂದಿಸಿದರು.