Tuesday, February 25, 2025
Tuesday, February 25, 2025

ಡಿ. 15, 16: ಕಲ್ಯಾ ಸರಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ

ಡಿ. 15, 16: ಕಲ್ಯಾ ಸರಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ

Date:

ಕಾರ್ಕಳ, ಡಿ. 14: ಕಾರ್ಕಳ ತಾಲೂಕಿನ ಕಲ್ಯಾ (ಹಾಳೆಕಟ್ಟೆ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಅದ್ದೂರಿಯ ಶತಮಾನೋತ್ಸವ ಸಂಭ್ರಮಕ್ಕೆ ಸಿದ್ಧವಾಗಿದ್ದು ಡಿಸೆಂಬರ್ 15-16 ರಂದು ವೇದಿಕೆ ಏರಲಿದೆ. ಒಂದು ವರ್ಷದ ಹಿಂದೆ ಶತಮಾನೋತ್ಸವ ಸಮಿತಿ ರಚನೆಯಾಗಿದ್ದು ಕನ್ನಡ ಶಾಲೆಯ ಅಭಿವೃದ್ಧಿಗೆ ಪೂರಕವಾದ ಅಭಿವೃದ್ದಿಯ ಕಾಮಗಾರಿಗಳನ್ನು ಪೂರ್ತಿ ಮಾಡಿದೆ. ಶಾಲೆಯ ಸಾವಿರಾರು ಪೂರ್ವ ವಿದ್ಯಾರ್ಥಿಗಳು ಈ ಶಾಲೆಯ ಮೇಲಿನ ಪ್ರೀತಿಯಿಂದ ಸ್ವಯಂ ಸ್ಫೂರ್ತಿಯಿಂದ ಮುಂದೆ ಬಂದಿರುವುದು ವಿಶೇಷವಾಗಿದೆ.

ಕಾರ್ಕಳದ ಶಾಸಕ ವಿ ಸುನೀಲ್ ಕುಮಾರ್ ಅವರು ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ಮಾಡಿದ್ದು ಮಾತ್ರವಲ್ಲದೆ 45 ಲಕ್ಷ ವೆಚ್ಚದ ಮೂರು ತರಗತಿ ಕೋಣೆಗಳನ್ನು ಶಾಸಕರ ಅನುದಾನದಲ್ಲಿ ಪೂರ್ತಿ ಮಾಡಿಕೊಟ್ಟಿದ್ದಾರೆ. ಹಾಗೆಯೇ ಅವರ ಶಿಫಾರಸ್ಸಿನ ಆಧಾರದಲ್ಲಿ ಖನಿಜ ಪ್ರತಿಷ್ಠಾನದ ಮೂಲಕ ಐದು ಲಕ್ಷ ವೆಚ್ಚದ ನೂತನ ಅಡುಗೆ ಕೋಣೆ ಪೂರ್ತಿ ಆಗಿದೆ.

ಶಾಲೆಯ ಅಭಿಮಾನದ ಮೇಲೆ ಶಾಲೆಯ ಪೂರ್ವ ವಿದ್ಯಾರ್ಥಿಗಳು ಶಾಲೆಯ ನೆರವಿಗೆ ಬಂದು ವಿವಿಧ ದಾನಿಗಳ ಮೂಲಕ ಶಾಲಾ ಆವರಣ ಗೋಡೆ, ದ್ವಾರ, ಬಾಲವನ, ಇಂಟರ್ ಲಾಕ್, ಕಂಪ್ಯೂಟರ್ ಲ್ಯಾಬ್, ವಿಸ್ತಾರವಾದ ಸಭಾಂಗಣ, ವಾಚನಾಲಯ, ಪೀಠೋಪಕರಣ, ಪ್ರಯೋಗಾಲಯ, ನೂತನ ಧ್ವಜ ಸ್ತಂಭ, ಒಂದು ಶಾಲೆಗೆ ಯಾವುದೆಲ್ಲ ಅಗತ್ಯವಿದೆಯೋ, ಅದನ್ನೆಲ್ಲ ಪೂರ್ತಿ ಮಾಡಿ ಕೊಟ್ಟಿದ್ದಾರೆ. ಸುಮಾರು ಒಂದೂವರೆ ಕೋಟಿ ವೆಚ್ಚದ ಕಾಮಗಾರಿಗಳು ಪೂರ್ತಿಯಾಗಿದ್ದು, ಶಾಲೆಯು ಆಧುನಿಕ ರೂಪವನ್ನು ಪಡೆದಿರುವುದು ಎದ್ದು ಕಾಣುತ್ತಿದೆ.

ಒಂದು ಕನ್ನಡ ಶಾಲೆಯ ಅಭಿವೃದ್ಧಿಗೆ ಶತಮಾನೋತ್ಸವ ಸಮಿತಿ ಮತ್ತು ಪೂರ್ವ ವಿದ್ಯಾರ್ಥಿಗಳ ಸಂಘಗಳು ಕೈ ಜೋಡಿಸಿದ್ದಾರೆ. ಶಾಲೆಯ ಆವರಣದಲ್ಲಿ ಹುತಾತ್ಮ ಸೈನಿಕ ಕ್ಯಾಪ್ಟನ್ ಪ್ರಾಂಜಲ್ ಅವರ ಸ್ಮಾರಕವು ನಿರ್ಮಾಣವಾಗಲಿದ್ದು ಅದರ ಶಂಕುಸ್ಥಾಪನೆ ಈಗಾಗಲೇ ನೆರವೇರಿದೆ.

ಈ ಶಾಲೆಯಲ್ಲಿ ಈಗ ಅಂಗನವಾಡಿ ಯಿಂದ ಆರಂಭಿಸಿ ಏಳನೇ ತರಗತಿಯವರೆಗೆ 150ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಇದ್ದಾರೆ. ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಿದ್ದಾರೆ. ವಿಶೇಷವಾಗಿ ಈ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ನೂರಾರು ಉದಾಹರಣೆಗಳು ಇವೆ. ಇಲ್ಲಿ ಕೆಲಸ ಮಾಡಿದ ಮತ್ತು ಈಗ ಕೆಲಸ ಮಾಡುತ್ತಿರುವ ಶಿಕ್ಷಕರ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ. ಉತ್ಸವದ ವೇದಿಕೆಯಲ್ಲಿ ಗುರುವಂದನಾ ಕಾರ್ಯಕ್ರಮವು ಮುಖ್ಯವಾದ ಕಾರ್ಯಕ್ರಮ ಆಗಿದೆ. ಶತಮಾನೋತ್ಸವದ ಅವಧಿಯಲ್ಲಿ ಶಾಲೆಯ ಸಾಧನೆಗಳನ್ನು ಮೆಲುಕು ಹಾಕುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಎರಡು ದಿನಗಳ ಮಹೋತ್ಸವ: ಕಲ್ಯಾ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವು ಡಿಸೆಂಬರ್ 15 ಮತ್ತು 16ರಂದು ಜರಗಲಿದ್ದು ಎಲ್ಲಾ ವ್ಯವಸ್ಥೆಗಳು ಪೂರ್ತಿಯಾಗಿವೆ. ಡಿಸೆಂಬರ್ 15ರಂದು ಮುಂಜಾನೆ ಧ್ವಜಾರೋಹಣ, ವೈಭವದ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಶೋಭಾಯಾತ್ರೆ, ಶತಮಾನೋತ್ಸವದ ಉದ್ಘಾಟನಾ ಸಮಾರಂಭ, ಗುರುವಂದನೆ, ದಾನಿಗಳ ಸನ್ಮಾನ, ಗುರುಸ್ತುತಿ ಇತ್ಯಾದಿ ಕಾರ್ಯಕ್ರಮಗಳಿವೆ.

ಡಿಸೆಂಬರ್ 16ರಂದು ‘ಪ್ರಾಥಮಿಕ ಶಿಕ್ಷಣ ಅಂದು, ಇಂದು ಮತ್ತು ಮುಂದು’ ಈ ವಿಷಯದ ಮೇಲೆ ಶಿಕ್ಷಕ ಸಂಘಗಳನ್ನು ಒಳಗೊಂಡ ವಿಚಾರಗೋಷ್ಠಿ ಇದೆ. ಸಮಾರೋಪ ಸಮಾರಂಭ, ಸ್ಮರಣ ಸಂಚಿಕೆ ಬಿಡುಗಡೆ, ಸಾಧಕರ ಸನ್ಮಾನ, ದಾನಿಗಳ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ನೆರವೇರಲಿವೆ. ಈ ಕಾರ್ಯಕ್ರಮಗಳಿಗೆ ಊರ ಮತ್ತು ದೂರದ ಮುಂಬೈಯಲ್ಲಿ ನೆಲೆಸಿರುವ ಪೂರ್ವ ವಿದ್ಯಾರ್ಥಿಗಳು ಬಂದು ಭಾಗವಹಿಸುತ್ತಿದ್ದಾರೆ.

ಈ ಶತಮಾನೋತ್ಸವ ಸಮಿತಿಯ ನೇತೃತ್ವ ವಹಿಸಿರುವ ಅಧ್ಯಕ್ಷ ಸಂತೋಷ್ ಶೆಟ್ಟಿ ಗುರ್ಮೆದ ಬೈಲು, ಮುಂಬೈ ಸಮಿತಿ ಅಧ್ಯಕ್ಷ ಮಣ್ಣಬೆಟ್ಟು ಮನೋಹರ್ ಎನ್ ಶೆಟ್ಟಿ, ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಂದಳಿಕೆ ರವಿದಾಸ ಕುಡ್ವ, ಶಾಲೆಯ ಮುಖ್ಯ ಶಿಕ್ಷಕಿ ಕಸ್ತೂರಿ ಎಸ್ ಒಳಗೊಂಡ ಶಿಕ್ಷಕ ವೃಂದ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಆಶಾ ಮತ್ತು ವಿವಿಧ ಉಪಸಮಿತಿಗಳ ಸಂಚಾಲಕರ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ.

ಶಾಲೆಯ ಶತಮಾನೋತ್ಸವದ ನೆಪದಲ್ಲಿ ಬಲಿಷ್ಠವಾದ ಪೂರ್ವ ವಿದ್ಯಾರ್ಥಿಗಳ ಸಂಘವು ರಚನೆಯಾಗಿದ್ದು ಶಾಲೆಯ ಮುಂದಿನ ದಶಕದ ಅಭಿವೃದ್ಧಿಗೆ ಕಟಿಬದ್ಧವಾಗಿ ನಿಂತಿದೆ. ಈ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಊರ ಮತ್ತು ಪರವೂರ ವಿದ್ಯಾಭಿಮಾನಿಗಳನ್ನು ಉಭಯ ಸಮಿತಿಗಳು ಹಾರ್ದಿಕವಾಗಿ ಸ್ವಾಗತಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!