ಬ್ರಹ್ಮಾವರ, ಡಿ.12: ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಇಶಾ ಹಠ ಯೋಗ ಫೌಂಡೇಶನ್ ವತಿಯಿಂದ ಉಪನ್ಯಾಸ ಹಾಗೂ ತರಬೇತಿ ಕಾರ್ಯಕ್ರಮ ನಡೆಯಿತು.
ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯದ ಜೀವನದಲ್ಲಿ ಯೋಗ ಒಂದು ಆರೋಗ್ಯ ಪೂರ್ಣವಾದ ಅಭ್ಯಾಸ ಮಾರ್ಗವಾಗಿದೆ ಎಂದು ಈಶ ಫೌಂಡೇಶನ್ ಶಿಕ್ಷಕರಾದ ಪ್ರವೀಣ್ ಕುಮಾರ್ ಮತ್ತು ಕಾರ್ಯಕರ್ತ ಸುಬ್ರಹ್ಮಣ್ಯ ಹೇಳಿದರು. ಕಾಲೇಜಿನ ಸಂಸ್ಥಾಪಕ ಸುಬ್ರಹ್ಮಣ್ಯ, ನಿರ್ದೇಶಕಿ ಮಮತಾ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸೀಮಾ ಜಿ ಭಟ್ ಹಾಗೂ ಸಂಸ್ಥೆಯ ಬೋಧಕ ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಗ್ಲಾನೆಲ್ ಅತಿಥಿಗಳನ್ನು ಪರಿಚಯಿಸಿದರು. ಹೀನಾ ಕೌಸರ್ ಸ್ವಾಗತಿಸಿ, ಉಪನ್ಯಾಸಕಿ ಸೋಫಿಯಾ ವಂದಿಸಿದರು. ಅನುಪಮ ಪಿ ಭಟ್ ನಿರೂಪಿಸಿದರು.
ಬ್ರಹ್ಮಾವರ: ಉಪನ್ಯಾಸ ಕಾರ್ಯಕ್ರಮ

ಬ್ರಹ್ಮಾವರ: ಉಪನ್ಯಾಸ ಕಾರ್ಯಕ್ರಮ
Date: