ಉಡುಪಿ, ಡಿ.7: ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಬೈಂದೂರು,
ಪ್ರಗತಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕಂಬದಕೋಣೆ ಇವರ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಬೆಂಗಳೂರು ಇವರ ವತಿಯಿಂದ ಸ್ವಾವಲಂಬನೆ ಯೋಜನೆಯಡಿ ಆಯ್ಕೆಯಾದ ಪಲಾನುಭವಿ ಸಂಗೀತಾ ಇವರು ಕಂಬದಕೋಣೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಹೋಟೆಲ್ ಉಡುಪಿ ಸಂಜೀವಿನಿ ಗ್ರ್ಯಾಂಡ್ ಇನ್ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಹೆಚ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರದ ಮೂಲಕ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮೀಣ ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶವನ್ನು ಈ ಯೋಜನೆ ಮೂಲಕ ಹೊಂದಲಾಗಿದೆ. ಇಂದು ಸ್ವಾವಲಂಬನೆ ಯೋಜನೆಯಡಿ ಆಯ್ಕೆಯಾಗಿ ಹೋಟೆಲ್ ಉದ್ಯಮ ಪ್ರಾರಂಭಿಸುತ್ತಿರುವ ಸಂಗೀತ ಇವರ ಈ ಒಂದು ಪರಿಶ್ರಮ ಮತ್ತು ಸಾಧನೆ ಇತರೆ ಮಹಿಳೆಯರಿಗೆ ಒಂದು ಮಾದರಿ. ಅದರಂತೆ ಇತರೆ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಸರಕಾರದ ಯೋಜನೆಯ ಪ್ರಯೋಜನ ಪಡೆದು ಸ್ವ ಉದ್ಯೋಗ ಕೈಗೊಳ್ಳುವುದರ ಮೂಲಕ ಉದ್ಯಮಿಗಳಾಗಬೇಕು, ಆ ಮೂಲಕ ಇತರ ಮಹಿಳೆಯರಿಗೆ ತಮ್ಮ ಉದ್ಯಮದ ಅಡಿಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದರು.
ಬೈಂದೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಭಾರತಿ ಎನ್.,ಕಂಬದಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗಮ್ಮ ದೇವಾಡಿಗ, ಉಪಾಧ್ಯಕ್ಷರಾದ ಗಣೇಶ್ ದೇವಾಡಿಗ, ಕೇರ್ಗಾಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ಪೂಜಾರಿ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿ, ಡಾ. ಸುಬ್ರಹ್ಮಣ್ಯ ಭಟ್, ಕಂಬದಕೋಣೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಪ್ರಗತಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಪ್ರಮೀಳಾ, ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್, ತಾಲೂಕು ವ್ಯವಸ್ಥಾಪಕರಾದ ಯತೀಶ್, ಪ್ರಶಾಂತ್, ಬಾಲಕೃಷ್ಣ ಪ್ರಭು, ರಾಘವೇಂದ್ರ, ರಾಜು ಪೂಜಾರಿ, ಗಣೇಶ್ ಸುವರ್ಣ ಮತ್ತು ಸಂಜೀವಿನಿ ಸ್ವ ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.