ಬ್ರಹ್ಮಾವರ, ನ.30: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆ ನಡೆಯಿತು. ಪ್ರಾಂಶುಪಾಲರಾದ ಪ್ರೊ. ರಮೇಶ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಗಂಗಾಧರ ಡಿ ವಿಶೇಷ ಉಪನ್ಯಾಸ ನೀಡಿದರು. ಗ್ರಂಥಾಲಯದ ಪ್ರಾಮುಖ್ಯತೆಯ ಬಗ್ಗೆ ವಿಸ್ತ್ರತವಾಗಿ ಮಾತನಾಡಿದ ಅವರು, ಒಂದು ವ್ಯಕ್ತಿ ಉನ್ನತ ಮಟ್ಟಕ್ಕೆ ಹೋಗುವಲ್ಲಿ ಪ್ರತಿನಿತ್ಯದ ಓದು ಅವಶ್ಯಕ ಎಂದು ಸಾಧಕರಾದ ಬಿಲ್ ಗೇಟ್ಸ್, ವಾರನ್ ಬಫೆಟ್ಸ್, ಏಲಾನ್ ಮಸ್ಕ್ ರವರನ್ನು ಉಲ್ಲೇಖಿಸಿದರು.
ಗ್ರಂಥಪಾಲಕರಾದ ಹರೀಶ್ ಸಿ.ಕೆ ಅವರು ಗ್ರಂಥಾಲಯದ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರಾದ ರಾಘವೇಂದ್ರ ಎಚ್.ಎಸ್., ಶ್ರುತಿ ಆಚಾರ್ಯ, ಗ್ರಂಥಾಲಯ ಸಹಾಯಕರಾದ ಮಂಜುನಾಥ್, ಗ್ರಂಥಾಲಯ ವಿದ್ಯಾರ್ಥಿ ಪ್ರತಿನಿಧಿಗಳಾದ ಉದಯ್ ಕುಮಾರ್, ಲಾವಣ್ಯ, ಪ್ರಸನ್ನ ಉಪಸ್ಥಿತರಿದ್ದರು.