Sunday, September 8, 2024
Sunday, September 8, 2024

ಗೋವು ಅಮೂಲ್ಯ ಸಂಪತ್ತು

ಗೋವು ಅಮೂಲ್ಯ ಸಂಪತ್ತು

Date:

ಬ್ರಹ್ಮಾವರ, ನ.30: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರುಡ್ ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 75ನೇ ಜನ್ಮದಿನವನ್ನು ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳ ಸಂಘಟನೆಯಾದ ರುಡ್ ಸೆಟ್ ಆಸರೆ ಸಂಘಟನೆಯ ವತಿಯಿಂದ ನಂಚಾರಿನ ಶ್ರೀ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ಗೋಶಾಲೆಯಲ್ಲಿ ಆಚರಿಸಲಾಯಿತು. ಗೋವುಗಳಿಗೆ ಆಹಾರ ಮತ್ತು ಗೋಶಾಲೆಗೆ ಸಹಾಯಧನ ನೀಡಲಾಯಿತು. ರುಡ್‌ಸೆಟ್ ನಿರ್ದೆಶಕರಾದ ಲಕ್ಷ್ಮೀಶ ಎ. ಜಿ ಮಾತನಾಡಿ, ನಾಡಿನ ಅತೀ ಅಮೂಲ್ಯವಾದ ಸಂಪತ್ತು ಗೋವುಗಳು. ಅವುಗಳಿಗೆ ಆಹಾರ ಒದಗಿಸುವುದರ ಮೂಲಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನವನ್ನು ರುಡ್ ಸೆಟ್ ಆಸರೆ ಸಂಘಟನೆ ಆಚರಿಸುತ್ತಿರುವುದು ಅರ್ಥಪೂರ್ಣ ಕಾರ‍್ಯಕ್ರಮ ಎಂದರು.

ರುಡ್ ಸೆಟ್ ಹಿರಿಯ ಉಪನ್ಯಾಸಕ ಕೆ. ಕರುಣಾಕರ್ ಜೈನ್ ಮಾತನಾಡಿ, ಹಲವಾರು ಕ್ಷೇತ್ರಗಳಲ್ಲಿ ದೂರದೃಷ್ಟಿಯ ಕನಸು ಕಂಡು ನನಸು ಮಾಡುತ್ತಿರುವ ನಮ್ಮಸಂಸ್ಥೆ ಮತ್ತು ಸಮಾಜದ ಹೆಮ್ಮೆಯ ದಾರ್ಶನಿಕರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 75ರ ಹುಟ್ಟುಹಬ್ಬವನ್ನು ಕಾಮಧೇನು ಆಗಿರುವ ಗೋವಿನ ಸೇವೆಯೊಂದಿಗೆ ರುಡ್ ಸೆಟ್ ಆಸರೆ ಸಂಘಟನೆ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ‍್ಯ ಎಂದರು.

ಆಸರೆ ಸಂಘಟನೆಯ ಗೌರಧ್ಯಕ್ಷರಾದ ರಾಜೇಶ್ ದೇವಾಡಿಗ, ಮಾಜಿ ಅಧ್ಯಕ್ಷರು, ಉದ್ಯಮಿಗಳಾದ ಕೆ. ಸಿ. ಅಮೀನ್, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಚಂದ್ರಶೇಖರ ನಾವಡ, ಶ್ರೀ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ಪ್ರಮುಖರಾದ ರಾಜೇಂದ್ರ ಚಕ್ಕರೆ, ಆಸರೆ ಸಂಸಘಟನೆಯ ಅಧ್ಯಕ್ಷರಾದ ಹರಿಣಿ ಅಜಯ ರಾವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸುಲೇಖವರ, ರುಡ್ ಸೆಟ್ ಉಪನ್ಯಾಸಕರಾದ ಸಂತೋಷ ಶೆಟ್ಟಿ, ರವಿ ಸಾಲ್ಯಾನ್, ಬ್ಯೂಟೀಶಿಯನ್ ತರಬೇತಿಯ ಗೌರವ ಉಪನ್ಯಾಸಕಿ ಪ್ರೀತಿ, ಆಸರೆ ಸಂಘಟನೆಯ ಬಿ.ಕುಶ, ಪ್ರವೀಣ್ ಮಲ್ಪೆ, ರಾಜಲಕ್ಷೀ, ಸುಜ್ಯೋತಿ, ನಾಗರತ್ನ,ಶಾರಾದ, ರಾಗಿಣಿ, ಭವ್ಯ ಉಪಸ್ಥಿತರಿದ್ದರು. ಆಸರೆ ಸಂಘಟನೆಯ ಕಾರ‍್ಯದರ್ಶಿ ಸೂರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವೆಂಕಟೇಶ ನಾಯ್ಕ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೇಶಕ್ಕೆ ಶಿಕ್ಷಕರ ಸೇವೆ ಮಹತ್ವದ್ದು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಸೆ.7: ಶಿಕ್ಷಕರು ರಾಷ್ಟ್ರಕ್ಕೆ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಇಂದಿನ...

ಸುಳ್ಳು ದಾಖಲೆ ಸೃಷ್ಟಿ: ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್ ಸೇವೆಯಿಂದ ಬಿಡುಗಡೆ

ನವದೆಹಲಿ, ಸೆ.7: 2023 ರ ಬ್ಯಾಚ್ ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್...

18ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ

ಬೆಳ್ಮಣ್, ಸೆ.7: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಮದ್ಯ ಮಾರಾಟ ನಿಷೇಧ

ಉಡುಪಿ, ಸೆ.6: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ...
error: Content is protected !!