ಉಡುಪಿ, ನ.29: ಹಿರಿಯ ನಾಗರಿಕರು ಸಾಮಾಜಿಕವಾಗಿ, ದೈಹಿಕವಾಗಿ, ಸಾಂಸಾರಿಕವಾಗಿ ಹಾಗೂ ಮಾನಸಿಕವಾಗಿ ದೌರ್ಜನ್ಯ, ಕಿರುಕುಳ, ಹಿಂಸೆ, ಶೋಷಣೆ, ಕೌಟುಂಬಿಕ ಸಮಸ್ಯೆ, ಮಕ್ಕಳ ಬೇಜವಬ್ದಾರಿತನ, ದುರ್ಬಲತೆ, ಅಸಹಾಯಕತೆ, ಅಭದ್ರತೆ ಮುಂತಾದ ಅನೇಕ ಅನ್ಯಾಯ, ಸಮಸ್ಯೆಗಳಿಂದ ರಕ್ಷಣೆಯಿಲ್ಲದ ಸಂದಿಗ್ಧ ಮತ್ತು ಸಂಕಷ್ಟ ಪರಿಸ್ಥಿತಿಗೆ ಒಳಗಾಗಿದ್ದಲ್ಲಿ ಅಂತಹ ತುರ್ತು ಸಂದರ್ಭದಲ್ಲಿ ಹಿರಿಯ ನಾಗರಿಕರ ಉಚಿತ ಸಹಾಯವಾಣಿ ಸಂಖ್ಯೆ: 1090 ಅಥವಾ ದೂ.ಸಂಖ್ಯೆ: 0820-2526394 ಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಬನ್ನಂಜೆ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹಿರಿಯ ನಾಗರಿಕರ ಸಹಾಯವಾಣಿ

ಹಿರಿಯ ನಾಗರಿಕರ ಸಹಾಯವಾಣಿ
Date: