ಕಾಪು, ನ.29: ಆತ್ಮಶಕ್ತಿ ವಿವಿದ್ಧೋದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಕಾಪು ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ರೋಟರಿ ಕ್ಲಬ್ ಕಾಪು ಇವರ ಜಂಟಿ ಸಹಯೋಗದೊಂದಿಗೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಹಾಗೂ ಶ್ರೀನಿವಾಸ ಇನ್ಸ್ಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ಮುಕ್ಕ ಇವರ ವೈದ್ಯರ ತಂಡದೊಂದಿಗೆ ಉಚಿತ ನೇತ್ರ ತಪಾಸಣಾ ಮತ್ತು ದಂತಾ ಚಿಕಿತ್ಸಾ ಶಿಬಿರವು ಹೊಸ ಮಾರಿಗುಡಿ ಹತ್ತಿರ ಕಾಪು ಸಂಘದ ವಠಾರದಲ್ಲಿ ನಡೆಯಿತು. ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ನಿರ್ದೇಶಕರಾದ ಡಾ. ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಸಂಘವು 30 ಶಾಖೆಗಳನ್ನು ಹೊಂದಿ ಪ್ರಗತಿಯ ಪಥದಲ್ಲಿ ಸಾಗುತ್ತಿದ್ದು ರಾಜ್ಯಕ್ಕೆ ಮಾದರಿ ಸಂಸ್ಥೆಯಾಗುತ್ತಿದೆ. ಸಂಘವು ಬ್ಯಾಂಕಿಂಗ್ ಕ್ಷೇತ್ರದ ಜೊತೆಗೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡು ಬರುತ್ತಿದೆ.ಸಂಘವು ಇನ್ನಷ್ಟು ಎತ್ತರಕ್ಕೆ ಏರಲಿ ಹಾಗೂ ಕಾಪುವಿನ ಜನತೆ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲಿ ಎಂದರು.
ಮುಖ್ಯ ಅತಿಥಿ ಹೊಸಮಾರಿಗುಡಿ ಕಾಪು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಕಾಪು ಕೇತ್ರದಲ್ಲಿ ಶಾಖೆಯನ್ನು ಪ್ರಾರಂಭಿಸಿ ಪ್ರಥಮ ವರ್ಷದಲ್ಲೇ ಇಂತಹ ವೈದ್ಯಕೀಯ ಶಿಬಿರವನ್ನು ಆಯೋಜಿಸಿರುವುದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ರೋಟರಿ ಕ್ಲಬ್ ಕಾಪು ಅಧ್ಯಕರಾದ ರಾಜೇಂದ್ರನಾಥ ಮಾತನಾಡಿ, ಆತ್ಮಶಕ್ತಿ ಒಂದು ಆರ್ಥಿಕ ಸಂಸ್ಥೆಯಾಗಿದ್ದು ಬ್ಯಾಂಕ್ ವ್ಯವಹಾರದ ಜೊತೆಗೆ ಇಂತಹ ಜನಪರ ಕಾರ್ಯ ಮಾಡುವುದು ಶ್ಲಾಘನೀಯ ಎಂದರು. ಬಿಲ್ಲವ ಸಹಾಯಕ ಸಂಘ ಕಾಪು ಅಧ್ಯಕ್ಷರಾದ ವಿಕ್ರಮ್ ಕಾಪು ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷರಾದ ಮಾಧವ ಪಾಲನ್, ಸಂಘದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವುದು ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗಿದೆ ಎಂದರು. ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ಮುಕ್ಕ ವೈದ್ಯರಾದ ಡಾ. ವಿದ್ಯಾ ಭಟ್ ಹಲ್ಲಿನ ಸಂರಕ್ಷಣೆ ಹಾಗೂ ಶುಚಿತ್ವದ ಬಗ್ಗೆ ವಿವರಿಸಿದರು. ಪ್ರಸಾದ್ ನೇತ್ರಾಲಯದ ಪಿ ಅರ್ ಓ ಮೋಹನ್ ಪ್ರಸಾದ್ ಕಣ್ಣಿನ ಆರೋಗ್ಯ, ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ರವರು ಶಿಬಿರಕ್ಕೆ ಸಹಕರಿಸಿದ ರೋಟರಿ ಕ್ಲಬ್ ಕಾಪು ಹಾಗೂ ಎಲ್ಲರಿಗೂ ವಂದಿಸಿದರು. ಸಂಘವು ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ ಆಯೋಜಿಸುತ್ತಿದ್ದು, 57ನೇ ಉಚಿತ ಶಿಬಿರ ಇದಾಗಿರುತ್ತದೆ. ಶಿಬಿರದಲ್ಲಿ ವೈದ್ಯರು ನೀಡಿದ ಸಲಹೆಗಳನ್ನು ಪಡೆದು ತಮ್ಮ ಆರೋಗ್ಯ ಸಮಸ್ಯೆಗಳನ್ನು ಪ್ರಾರಂಭದಲ್ಲೇ ತಿಳಿದು ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬೇಕೆಂದು ನಮ್ಮ ಆಶಯ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಈ ಶಿಬಿರದಲ್ಲಿ ಬರುವ ರೋಗಿಗಳಿಗೆ ಉಚಿತ ಔಷಧಿ, ಉಚಿತ ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಸಹಭಾಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸುತ್ತಾ ಬಂದಿರುತ್ತದೆ. ನಮ್ಮ ಶಿಬಿರಗಳಲ್ಲಿ 12000 ಕ್ಕೂ ಮಿಕ್ಕಿ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗಿದೆ. ಮುಂದಿನ ಶಿರವು ಡಿಸೆಂಬರ್ 10 ರಂದು ಮಂಗಳಾದೇವಿಯಲ್ಲಿ ನಡೆಯಲ್ಲಿದ್ದು ಈ ಶಿಬಿರದಲ್ಲಿ ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಮ್ಯಾಮೋಗ್ರಾಮ್, ಪ್ಯಾಪ್ ಸ್ಮೀಯರ್ ಪರೀಕ್ಷೇಗಳು ಲಭ್ಯವಿರುದೆಂದು ತಿಳಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ರಮಾನಾಥ ಸನಿಲ್, ಗೋಪಾಲ್ ಎಂ., ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಪ್ರಸಾದ್ ನೇತ್ರಾಲಯ ಉಡುಪಿಯ ವೈದ್ಯರಾದ ಡಾ.ಅಹನ, ಯುವವಾಹಿನಿ ಕಾಪು ಅಧ್ಯಕ್ಷರಾದ ಸೂರ್ಯನಾರಾಯಣ, ಗರಡಿಯ ಮಾಜಿ ಅಧ್ಯಕ್ಷ ಸುರೇಶ್ ಅಂಚನ್, ಆಡಳಿತ ನಿರ್ದೇಶಕ ಮಹಾಬಲ ಮಾಲ್ ಕಾಪು ಯೋಗಿಶ್ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ ಆಡಳಿತ ಮುಖ್ಯಸ್ಥ ಮೋಹನ್ ಎಮ್ ಬಂಗೇರ, ರೋಟರಿ ಕ್ಲಬ್ ಕಾಪು ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ರೋಟರಿ ಕ್ಲಬ್ ಕಾಪು ಪದಾಧಿಕಾರಿಗಳಾದ ಶ್ರೀನಿವಾಸ್ ರಾವ್, ಬಾಲಕೃಷ್ಣ ಆಚಾರ್ಯ, ಮನೋಹರ್ ಕೆ., ಲಕ್ಷ್ಮೀನಾರಾಯನಾಣ ತಂತ್ರಿ, ಮಾಧವ ಸಾಲ್ಯಾನ್, ಸದಾಶಿವ ಭಟ್ ಹಾಗೂ ಮತ್ತಿತರರು ಉಪಸ್ಧಿತರಿದ್ದರು.
ಸುಮಾರು 300 ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ದಂತ ಚಿಕಿತ್ಸೆ ಹಾಗೂ ಕಣ್ಣಿನ ತಪಾಸಣೆನ್ನು ನಡೆಸಿ ಭಾಗವಹಿಸಿದ ಅಗತ್ಯವುಳ್ಳ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಹಿರಿಯ ಶಾಖಾಧಿಕಾರಿ ಸ್ವಾತಿ ಸ್ವಾಗತಿಸಿ, ಶಾಖಾಧಿಕಾರಿ ಚೈತ್ರ ವಂದಿಸಿದರು. ಮಾನವ ಸಂಪನ್ಮೂಲ ಅಧಿಕಾರಿ ದೀಪಿಕ ಸನಿಲ್ ನಿರೂಪಿಸಿದರು.