ಉಡುಪಿ, ನ. 16: ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ನ ವಿಶ್ವಸ್ಥರಾಗಿ ಇಡೀ ಉಡುಪಿಗೇ ಹೆಮ್ಮೆ ತಂದಿರುವ ಶ್ರೀ ಪೇಜಾವರ ಮಠಾಧೀಶಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಇದೀಗ ಸಾರ್ಥಕ ಜೀವನದ 60 ರ ಸಂಭ್ರಮ. ತಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅನ್ವರ್ಥ ಶಿಷ್ಯರಾಗಿ ಅವರು ಹಾಕಿ ಕೊಟ್ಟ ಮಾರ್ಗದಲ್ಲೇ ಹೆಜ್ಜೆ ಹಾಕುತ್ತಾ ಗೋಸೇವೆ, ವೇದಶಾಸ್ತ್ರಾಧ್ಯಯನ ಅಧ್ಯಾಪನ , ಶಿಕ್ಷಣ ಆರೋಗ್ಯ, ದೀನಜನ ಶುಶ್ರೂಷೆ, ಧರ್ಮ ರಕ್ಷಣೆಯೇ ಮೊದಲಾದ ಬಹುಮುಖಿ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಾ ನಿರಂತರ ದೇಶ ಸಂಚಾರದ ಮೂಲಕ ಜನರಲ್ಲಿ ರಾಮಭಕ್ತಿ, ದೇಶಭಕ್ತಿಯ ಜಾಗೃತಿ ಮೂಡಿಸುತ್ತಿರುವ ಶ್ರೀಪಾದರ ಷಷ್ಠ್ಯಬ್ದಿ ಮಹೋತ್ಸವದ ಪ್ರಯುಕ್ತ ಅವರನ್ನು ಅಭಿವಂದಿಸುವುದು ಕೇವಲ ಅವರ ಶಿಷ್ಯರು ಭಕ್ತರು ಅಭಿಮಾನಿಗಳಿಗೆ ಮಾತ್ರವಲ್ಲದೇ ಉಡುಪಿಯ ಜನತೆಗೇ ಒದಗಿದ ಒಂದು ಭಾಗ್ಯ. ಈ ಕಾರ್ಯಕ್ರಮವನ್ನು ಜಿಲ್ಲೆಯ ಸಮಸ್ತ ನಾಗರಿಕರ ಸಹಕಾರ ಸಹಯೋಗವನ್ನು ಪಡೆದು ವೈಭವ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸಂಕಲ್ಪಿಸಲಾಗಿದೆ. ಈ ಉದ್ದೇಶಕ್ಕಾಗಿ ನವೆಂಬರ್ 18 ಶನಿವಾರ ಸಂಜೆ 5.30 ಕ್ಕೆ ಉಡುಪಿ ಅಜ್ಜರಕಾಡಿನ ಶ್ರೀ ಗೋವಿಂದ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. ಇದರಲ್ಲಿ ಶ್ರೀ ಪೇಜಾವರ ಮಠದ ಶ್ರೀಗಳವರ ಅಭಿಮಾನಿಗಳು ಭಕ್ತರು, ವಿದ್ವಾಂಸರು, ದೇವಸ್ಥಾನಗಳ ಧರ್ಮದರ್ಶಿಗಳು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಉದ್ಯಮಿಗಳು, ಭಜನಾ ಮಂಡಳಿ, ಹಿಂದು ಸಂಘಟನೆಗಳು, ವಿವಿಧ ಸಮಾಜ ಸೇವಾ ಸಂಸ್ಥೆಗಳು, ಜಾತಿ ಸಮುದಾಯಗಳ ಪ್ರತಿನಿಧಿಗಳು ಹಾಗೂ ಸಮಾನಮನಸ್ಕರು ಭಾಗವಹಿಸಿ ಸಲಹೆ ಸೂಚನೆಗಳನ್ನಿತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ವಿನಂತಿಸಿದ್ದಾರೆ.
ನ.18: ಉಡುಪಿಯಲ್ಲಿ ಗುರುವಂದನ ಪೂರ್ವಭಾವಿ ಸಭೆ
ನ.18: ಉಡುಪಿಯಲ್ಲಿ ಗುರುವಂದನ ಪೂರ್ವಭಾವಿ ಸಭೆ
Date: