ಕಟಪಾಡಿ, ನ.13: ಪತಂಜಲಿ ಯೋಗ ಸಮಿತಿ ಉಡುಪಿ ಕಟಪಾಡಿ ಕಕ್ಷೆ ವತಿಯಿಂದ ಕಟಪಾಡಿ ಇನ್ವೆಂಜರ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ವಿಶೇಷ ವಾಗಿ ಹಣತೆ ದೀಪಗಳೊಂದಿಗೆ ಯೋಗ ದೀಪಾವಳಿ ಕಾರ್ಯಕ್ರಮ ಕಟಪಾಡಿ ಮಹಿಳಾ ಮಂಡಲ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಕಟಪಾಡಿ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯೇಂದ್ರ ಪೈ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸನಾತನ ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಾನ್ಯತೆ ನೀಡಲಾಗಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವಲ್ಲಿ ಬೆಳಕು ಎಷ್ಟು ಪ್ರಾಮುಖ್ಯವೋ, ಆರೋಗ್ಯಕರ ಜೀವನ ಸಾಗಿಸುವಲ್ಲಿ ನಿರಂತರ ಯೋಗಾಭ್ಯಾಸ ಕೂಡಾ ಅತೀ ಅಗತ್ಯ ಎಂದರು.
ಪತಂಜಲಿ ಯೋಗ ಸಮಿತಿ ಕಟಪಾಡಿ ಕಕ್ಷೆಯ ಯೋಗ ಶಿಕ್ಷಕ ರಾಜೇಶ್ ಕಾಮತ್ ದೀಪದ ಬೆಳಕಿನೊಂದಿಗೆ ಮಹತ್ವದ ಯೋಗಾಸನಗಳನ್ನು ಕಲಿಸಿಕೊಟ್ಟರು. ಸಹಶಿಕ್ಷಕ ರಾಮಚಂದ್ರ ಪೈ, ಶಿಬಿರಾರ್ಥಿಗಳಾದ ಪ್ರದೀಪ್ ಆರ್. ಶೆಟ್ಟಿ, ಅನುಪಮ ಪೈ, ಅರುಂಧತಿ ಕಾಮತ್, ನಂದಿನಿ ಶೆಣೈ, ಸುಧೀಂದ್ರ ಶೆಟ್ಟಿ ಪಾಂಗಳ, ಪ್ರವೀಣ್ ಭಕ್ತ, ಸಂಪತ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಕಟಪಾಡಿ ಸೃಷ್ಠಿ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿ, ರಂಗನಟ ನಾಗೇಶ್ ಕಾಮತ್ ಕಟಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.