ಉಡುಪಿ, ನ.11: ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರ ಬಹುದಿನಗಳ ಬೇಡಿಕೆಯಾಗಿದ್ದ ಭಾರತ್ ಗ್ಯಾಸ್ ಗೋಡೌನ್ ನಿಂದ ತೋನ್ಸೆ ಮನೋಹರ್ ಶೆಟ್ಟಿ ಮನೆಗೆ ಹೋಗುವ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ನೆರವೇರಿಸಿದರು.
ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ್, ಉಪಾಧ್ಯಕ್ಷರಾದ ಪ್ರೇಮಲತಾ ಕಿಶೋರ್, ನಿಕಟಪೂರ್ವ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಸತೀಶ್ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯರಾದ ಉದಯ ಪೂಜಾರಿ, ಪ್ರಶಾಂತ್ ಆಚಾರ್ಯ, ಜಾನ್ಸನ್, ಕವಿತಾ ಮೇಸ್ತ, ಅನಿತಾ ನಾಯ್ಕ್, ಪ್ರಮುಖರಾದ ಮನೋಹರ್ ಶೆಟ್ಟಿ ತೋನ್ಸೆ, ಅಮಿತ್ ಪೂಜಾರಿ, ದಿನಕರ ಮಾಸ್ಟ್ರು, ಸತೀಶ್ ಶೆಟ್ಟಿ ಕೆಮ್ಮಣ್ಣು, ಸುನೀಲ್ ನೇಜಾರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು.