ಉಡುಪಿ, ನ.8: ಉಡುಪಿ ಜಿಲ್ಲೆಯ ಪ್ರಮುಖ ಸೇವಾ ಸಂಸ್ಥೆಯಾದ ಹೋಮ್ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು, ಕೊಳಲಗಿರಿ ಸಂತೆ ಮಾರುಕಟ್ಟೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ಸಮಾಜ ಸೇವಕರಾದ ಗೀತಾ ಶೆಟ್ಟಿ, ರಾಜೇಶ್ ರೈ, ಸಚ್ಚಿದಾನಂದ ಹೆಗ್ಡೆ, ಉದ್ಯಮಿಗಳಾದ ಯದುನಾಥ್, ಸದಾನಂದ ಶೆಟ್ಟಿ ಇವರು ಭಾಗವಹಿಸಿ ಶುಭ ಹಾರೈಸಿದರು. ಸಂಸ್ಥೆಯ ಪ್ರಮುಖರಾದ ಡಾ. ಶಶಿಕಿರಣ್ ಶೆಟ್ಟಿ ಮಾತನಾಡಿ, ಹೋಮ್ ಡಾಕ್ಟರ್ ಫೌಂಡೇಶನ್ ನಡೆದು ಬಂದ ಹಾದಿ ಮತ್ತು ಸಮಾಜ ಸೇವೆಗಳ ವಿವರಗಳನ್ನು ಸಭೆಗೆ ತಿಳಿಸಿದರು.
ವೇದಿಕೆಯಲ್ಲಿ ಡಾ. ಸುಮಾ ಎಸ್ ಶೆಟ್ಟಿ ಉಪಸ್ಥಿತರಿದ್ದರು. ರೋಷನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಹಲವಾರು ಅಸಹಾಯಕ ರೋಗಿಗಳಿಗೆ ಸಹಾಯಧನ ಮತ್ತು ಅಕ್ಕಿ ಸೇರಿದಂತೆ ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು. ನಂತರ ಶಾರದ ಅಂಧ ಕಲಾವಿದ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಸಾಮೂಹಿಕ ದೀಪ ಬೆಳಗಿಸುದರೊಂದಿಗೆ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಸದಸ್ಯರಾದ ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಸುಜಯ, ರಾಜೇಂದ್ರ, ಗಣೀಶ್, ಸುಂದರ ಪೂಜಾರಿ, ದಯಾನಂದ ಪೂಜಾರಿ, ರಾಘವೇಂದ್ರ ಕರ್ವಾಲು ಮುಂತಾದವರಿದ್ದರು.