Monday, January 20, 2025
Monday, January 20, 2025

ಬ್ರಹ್ಮಾವರ: ದನ ಕಳವು ಯತ್ನ

ಬ್ರಹ್ಮಾವರ: ದನ ಕಳವು ಯತ್ನ

Date:

ಬ್ರಹ್ಮಾವರ: ಫೆಬ್ರವರಿ 1ರ ಬೆಳಗಿನ ಜಾವ ಸುಮಾರು 4-30 ಗಂಟೆಗೆ ಮನೆಯ ನಾಯಿ ಬೊಗಳುವುದನ್ನು ಕೇಳಿ ಮನೆಯ ಹೊರಗೆ ನೋಡಿದಾಗ ಎದುರಿಗೆ ಇರುವ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 4 ದನಗಳ ಪೈಕಿ ಒಂದು ದನದ ಬಳಿ ಮರೆಯಲ್ಲಿ ಇಬ್ಬರು ಹೋಗಿ ದನದ ಕುತ್ತಿಗೆಯ ಹಗ್ಗವನ್ನು ಕತ್ತಲೆಯಲ್ಲಿ ಬಿಚ್ಚುತ್ತಿರುವುದು ಕಂಡು ಬಂದಿದ್ದು ಬೊಬ್ಬೆ ಹೊಡೆದಾಗ ಆ ವ್ಯಕ್ತಿಗಳು ಕೊಟ್ಟಿಗೆಯಿಂದ ಹೊರಗೆ ಹೋಗಿ ಕೊಟ್ಟಿಗೆ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಚಾಲನಾ ಸ್ಥಿತಿಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿರುತ್ತಾರೆ.

ಇನ್ನೋರ್ವ ವ್ಯಕ್ತಿ ಕಾರಿನ ಚಾಲನಾ ಸೀಟಿನಲ್ಲಿ ಕುಳಿತಿರುವುದು ಕಂಡು ಬಂತು. ಮೂವರು ವ್ಯಕ್ತಿಗಳು ಸುಮಾರು 30-35 ವರ್ಷ ಪ್ರಾಯದವರಾಗಿರುತ್ತಾರೆ. ಸ್ಕೂಟಿಯಲ್ಲಿ ಕಾರನ್ನು ಹಿಂಬಾಲಿಸಿಕೊಂಡು ಬಬ್ಬುಸ್ವಾಮಿ ದೇವಸ್ಥಾನ ನಂದಿಗುಡ್ಡೆ ಕ್ರಾಸ್‌‌ವರೆಗೆ ಬಂದು ಕಾರಿನ ನೊಂದಣಿ ನಂಬ್ರವನ್ನು ನೋಡಿದ್ದು, ನೊಂದಣಿ ಸಂಖ್ಯೆ ಕೆಎ – 04 – ಎಂಕೆ- 744 ಮಾರುತಿ ಕಂಪೆನಿಯ ಕಾರು ಆಗಿರುತ್ತದೆ ಎಂದು ರಾಘವೇಂದ್ರ ಅವರು ದೂರು ನೀಡಿದ್ದು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!