Monday, February 24, 2025
Monday, February 24, 2025

ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.): ಸಹಾಯಹಸ್ತ ಹಸ್ತಾಂತರ

ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.): ಸಹಾಯಹಸ್ತ ಹಸ್ತಾಂತರ

Date:

ಕುಂದಾಪುರ, ನ.೨: ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ). ಸಂಸ್ಥೆಯ ‌‌ಸಾಮಾನ್ಯ ಸಭೆ ಮತ್ತು ಸಹಾಯಹಸ್ತ ಹಸ್ತಾಂತರ ಕಾರ್ಯಕ್ರಮ ಶ್ರೀ ನಾಗಲಕ್ಷ್ಮಿ ಸಭಾಭವನ ಬಿದ್ಕಲ್ ಕಟ್ಟೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂದಿನ ಹಲವು ಸಂ‍ಸ್ಥೆಯ ಯೋಜನೆಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಕುಂಭಾಶಿಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯ ಚಿಕಿತ್ಸೆಯ ವೆಚ್ಚವಾಗಿ 10,000/- ರೂ.ಗಳ ಚೆಕ್ ಅನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.
ನೂತನ ಕಾರ್ಯದರ್ಶಿಯಾಗಿ ಸಂಸ್ಥೆಯ ಮಹಿಳಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ದಿವ್ಯ ಕುಂದಾಪುರ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಮುಂದಿನ ತಿಂಗಳಲ್ಲಿ ನಡೆಯುವ ಕೋಟೇಶ್ವರ ಕೊಡಿ ಹಬ್ಬದಲ್ಲಿ ದೇಣಿಗೆ ಸಂಗ್ರಹಿಸುವುದು ಹಾಗೂ ದೀಪಾವಳಿ ಹಬ್ಬವನ್ನು ನಿರಾಶ್ರಿತರ ಆಶ್ರಮದಲ್ಲಿ ಆಚರಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದಿನ ಕಾರ್ಯಕ್ರಮ ಜೈ ಕುಂದಾಪ್ರ ಸಮಾಗಮ- 2023 ಮತ್ತು ಸಹಾಯಹಸ್ತ ಹಸ್ತಾಂತರದ ಬಗ್ಗೆ ಚರ್ಚಿಸಲಾಯಿತು.

ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಸಂಸ್ಥೆಯ ಸ್ಥಾಪಕಾಧ್ಯಕ್ಷ ಪುಂಡಲೀಕ ಮೊಗವೀರ್ ತೆಕ್ಕಟ್ಟೆ, ಗೌರವ ಸಲಹೆಗಾರರಾದ ಆದಿತ್ಯ ಕೋಟ, ಮನೀಶ್ ಕುಲಾಲ್ ಜನ್ನಾಡಿ, ಸಂದೀಪ್ ಅಮಾಸೆಬೈಲು, ಆಕಾಶ್ ಮೊಗವೀರ, ಸುಕೇಶ್ ಬಿದ್ಕಲ್ ಕಟ್ಟೆ, ಭರತ್, ರಾಘವೇಂದ್ರ, ನಾಗರಾಜ್, ಹರೀಶ್ ನಾಯ್ಕ್, ಅವಿನಾಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...

ಶಾಂಭವಿ ಶಾಲೆ ಶತಮಾನೋತ್ಸವ ಮನವಿ ಪತ್ರ ಬಿಡುಗಡೆ

ಕೋಟ, ಫೆ.24: ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು...
error: Content is protected !!