ಬ್ರಹ್ಮಾವರ, ಅ.28: ಪವಿತ್ರ ಗ್ರಂಥವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಮಹರ್ಷಿ ವಾಲ್ಮೀಕಿಯ ಜಯಂತಿಯನ್ನು ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ ಹಾಗೂ ಕಾಲೇಜಿನ ನಿರ್ದೇಶಕಿ ಮಮತಾ, ಪ್ರಾಂಶುಪಾಲರಾದ ಡಾ. ಸೀಮಾ ಜಿ ಭಟ್, ಉಪ ಪ್ರಾಂಶುಪಾಲರಾದ ಸುಜಾತ, ಕನ್ನಡ ವಿಭಾಗದ ಮುಖ್ಯಸ್ಥೆ ಅನುಪಮಾ ಪಿ ಭಟ್, ಉಪನ್ಯಾಸಕರಾದ ಉದಯ್ ಕುಮಾರ್, ರೋಹನ್ ಹಾಗೂ ಬೋಧ ಬೋಧಕೇತರರು ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕಿ ರಾಝಿಕಾ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ: ವಾಲ್ಮೀಕಿ ಜಯಂತಿ ಆಚರಣೆ

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ: ವಾಲ್ಮೀಕಿ ಜಯಂತಿ ಆಚರಣೆ
Date: