ಉಡುಪಿ, ಅ.27: ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಸಾಕು ನಾಯಿಗಳನ್ನು ಹೊರಗೆ ಬಿಡದೇ ಮನೆಯಲ್ಲಿ ಕಟ್ಟಿ ಹಾಕಿ ಸಾಕಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳದಲ್ಲಿ ನಾಯಿಗಳನ್ನು ಬಿಡದೇ ಸಂರಕ್ಷಣೆ ಮಾಡುವುದು ಕರ್ತವ್ಯವಾಗಿದೆ. ಸಾಕು ನಾಯಿ ಮರಿಗಳನ್ನು ರಸ್ತೆಯಲ್ಲಿ ಬಿಡುವುದು ಕಂಡುಬಂದಿದ್ದು, ಸಾಕುನಾಯಿಗಳಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅವುಗಳಿಗೆ ಕಾಲಕಾಲಕ್ಕೆ ವ್ಯಾಕ್ಸಿನ್ ಹಾಕಿಸುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿ, ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಮನೆಯ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಸಾಕು ನಾಯಿಗಳನ್ನು ಬೀದಿಗೆ ಬಿಡದಂತೆ ಸೂಚನೆ

ಉಡುಪಿ: ಸಾಕು ನಾಯಿಗಳನ್ನು ಬೀದಿಗೆ ಬಿಡದಂತೆ ಸೂಚನೆ
Date: