ಉಡುಪಿ, ಅ.27: ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಹಯೋಗದೊಂದಿಗೆ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಮೊಗವೀರ ಭವನ ಉಚ್ಚಿಲದಲ್ಲಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯ ಅತ್ಯುತ್ತಮ ಚಿತ್ರಗಳನ್ನು ಗುರುತಿಸಿ ತೀರ್ಪುಗಾರರಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕಲಾವಿದರಾದ ರಮೇಶ್ ಕಿದಿಯೂರ್, ಶೇಖರ್ ಕಲಾಪ್ರತಿಭಾ, ಶ್ರೀಧರ್ ತೊಟ್ಟಂರವರು ವಿಜೇತರನ್ನು ಆಯ್ಕೆ ಮಾಡಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
1 ರಿಂದ 4 ನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ ನಿಹಾರ್ ಜೆ. ಎಸ್. (ಜಿ. ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ.), ದ್ವಿತೀಯ ಬಹುಮಾನ ಪ್ರಿಯದರ್ಶಿನಿ ಎಸ್. ಡಿ. (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ.), ತೃತೀಯ ಬಹುಮಾನ ನಿಧೀಶ್ (ಜಿ. ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ), ಹಾಗೂ ಸಮಾಧನಕರ ಬಹುಮಾನ ಪುಷ್ಟಿ ಪೂಜಾರಿ (ಸಿಲಾಸ್ ಇಂಟರ್‌ನ್ಯಾಷನಲ್ ಉಡುಪಿ) ಆಯ್ಕೆಯಾಗಿದ್ದಾರೆ. 5 ರಿಂದ 7 ನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ ಅನ್ವಿತ್ ಆರ್. ಶೆಟ್ಟಿಗಾರ್ (ಸೈಂಟ್ ಮೆರೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್), ದ್ವಿತೀಯ ಬಹುಮಾನ ಸಾನಿಧ್ಯ ಆಚಾರ್ಯ (ಎಫ್. ಎಸ್. ಎಚ್. ಇಂಗ್ಲೀಷ್ ಮೀಡಿಯಂ ಸ್ಕೂಲ್, ಪೆರ್ಡೂರು, ತೃತೀಯ ಬಹುಮಾನ ವಿನೀಷ್ ಆಚಾರ್ಯ ( ಎಸ್. ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ.), ಸಮಾಧಾನಕರ ಬಹುಮಾನ ಅವನಿ ಎ. ಅರಿಗ ( ಶ್ರೀ ಲಕ್ಷ್ಮಿ ಜನಾರ್ದನ ಇಂಟರ್‌ನ್ಯಾಷನಲ್ ಸ್ಕೂಲ್), ವಿಷ್ರುತ್ ಸಾಮಗ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ.), ಅದಿತಿ (ವಾಸುದೇವ ವಿದ್ಯಾ ಮಂದಿರ, ಬೈಲೂರು.)
ಆಯ್ಕೆಯಾಗಿದ್ದಾರೆ.
8 ರಿಂದ 10 ನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ ಕೆ. ಪ್ರತೀಷ್ಟ ಶೇಟ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ) ದ್ವಿತೀಯ ಬಹುಮಾನ ಅಕ್ಷಜ್ (ಎನ್.ಐ.ಟಿ.ಕೆ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಸುರತ್ಕಲ್), ತೃತೀಯ ಸ್ಪರ್ಶ ಪ್ರದೀಪ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ) ಹಾಗೂ ಸಮಾಧಾನಕರ ಬಹುಮಾನ ಧೃತಿ ಎಸ್. (ಲಿಟ್ಲ್ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ), ಚಿರಾಗ್ ವಿ. ಶೆಟ್ಟಿ (ಟಿ. ಎ. ಪೈ. ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಕುಂಜಿಬೆಟ್ಟು.), ಧನ್ವಿ ಯು. ಪೂಜಾರಿ (ಜಿ. ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ.) ಆಯ್ಕೆಯಾಗಿದ್ದಾರೆ. ಪಿಯುಸಿ ಮತ್ತು ಪದವಿ ವಿಭಾಗದಲ್ಲಿ ಪ್ರಥಮ ಬಹುಮಾನ ಮೋಕ್ಷಿತ್ ಸುರೇಶ್ (ಕೆನರಾ ಪಿ .ಯು. ಕಾಲೇಜು), ದ್ವಿತೀಯ ಬಹುಮಾನ ಹರ್ಷಿತ್ ಎಸ್. ಎಸ್. (ಶ್ರೀನಿವಾಸ ಯುನಿವರ್ಸಿಟಿ ಮುಕ್ಕ), ತೃತೀಯ ಆದರ್ಶ ಭಟ್ ಕೆ. (ಎನ್. ಎಮ್. ಎ. ಎಂ. ನಿಟ್ಟೆ. ಕಾರ್ಕಳ) ಸಮಧಾನಕಾರ ಬಹುಮಾನ ಶ್ರೀನಿಧಿ ಶೇಟ್ ವಿ (ಎನ್. ಎಮ್. ಎ. ಎಂ. ನಿಟ್ಟೆ. ಕಾರ್ಕಳ), ಪ್ರಾಪ್ತಿ ಪ್ರದೀಪ್ (ವಿದ್ಯೋದಯ ಪಿಯು ಕಾಲೇಜು ಉಡುಪಿ) ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಬಹುಮಾನ ಬಿಂದು ಕೆ., ದ್ವಿತೀಯ ಬಹುಮಾನ ಚರಣ್ ಕುಮಾರ್, ತೃತೀಯ ಬಹುಮಾನ ಅತುಲ್ ಹಾಗೂ ಸಮಾಧಾನಕರ ಬಹುಮಾನ ವಸುಧಾ ಕುಂಬ್ಳೆಕರ್ ಹಾಗೂ ವಾಸವಿ ಕುಂಬ್ಳೆಕರ್ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ, ಬಹುಮಾನ ವಿಜೇತರಿಗೆ ಹಾಗೂ ತೀರ್ಪುಗಾರರಿಗೆ ಬ್ಯಾಂಕಿನ ವತಿಯಿಂದ ಅಭಿನಂದನೆ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ವಂದನೆ ಸಲ್ಲಿಸುವುದಾಗಿ ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.