ಗಂಗೊಳ್ಳಿ, ಅ.25: ಸೇವಾ ಸಂಘ(ರಿ.) ಗಂಗೊಳ್ಳಿಯ 49 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ವೇದಿಕೆಯಲ್ಲಿ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಹುಮುಖ ಬಾಲ ಪ್ರತಿಭೆ ಸಂಜಿತ್ ಎಮ್ ದೇವಾಡಿಗ ತಮ್ಮ ತಂಡದೊಂದಿಗೆ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ಸಲ್ಲಿಸಿದರು. ‘ಶಾರದೆ ದಯೆ ತೋರಿದೆ’, ‘ಡೀ ಡೀ ಆಡ್ಯಾನೇ ರಂಗ’, ‘ಆವ ಕುಲವೋ ರಂಗ’, ‘ಕಣ್ಣುಗಳೆರಡು ಸಾಲದಮ್ಮ’, ‘ಕಮಲದ ಮೊಗದೋಳೆ’, ‘ತುಳುವನಾಡ ಧರ್ಮ ತುಡರ್’, ‘ಎಂಥ ಅಂದ ಎಂಥ ಚಂದ’, ‘ತಂಬೂರಿ ಮೀಟಿದವ’ ಮೊದಲಾದ ಗೀತೆಗಳನ್ನು ಸಾಕ್ಸೋಫೋನ್ ವಾದನದ ಮೂಲಕ ಸುಂದರವಾಗಿ ಪ್ರಸ್ತುತಪಡಿಸಿ ಜನಮನವನ್ನು ಸೆಳೆದರು.
ತವಿಲ್ ನಲ್ಲಿ ಹರ್ಷವರ್ಧನ ಖಾರ್ವಿ, ತಬಲಾದಲ್ಲಿ ಎಸ್ ರಾಮಕೃಷ್ಣ ಶೆಣೈ ಹಾಗೂ ತಾಳದಲ್ಲಿ ಮಾಧವ ದೇವಾಡಿಗ ಸಹಕರಿಸಿದರು. ಪ್ರಧಾನ ಪುರೋಹಿತರಾದ ಜಿ. ರಾಘವೇಂದ್ರ ನಾರಾಯಣ ಆಚಾರ್ಯ ಶುಭ ಹಾರೈಸಿದರು. ಸರಸ್ವತಿ ವಿದ್ಯಾಲಯದ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲ ಖಾರ್ವಿ ವಂದಿಸಿದರು.