ಉಡುಪಿ, ಅ.24: ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಸಂಸ್ಥೆಯ ಆ್ಯಂಟಿ ರ್ಯಾಗಿಂಗ್ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಮತ್ತು ಜಿಲ್ಲಾ ವಕೀಲರ ಸಂಘ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶರ್ಮಿಳಾ ಎಸ್ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಜಾಗೃತಿ ಕುರಿತಾಗಿ ಮಾಹಿತಿ ನೀಡಿದರು.
ಮಾನವ ಹಕ್ಕು ಪ್ರಾಧಿಕಾರ ಉಡುಪಿ ಅಧ್ಯಕ್ಷರಾದ ಪ್ರೀತಿ ವೈ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಕಾನೂನು ಜೀವನದ ಅವಿಭಾಜ್ಯ ಅಂಗವಾಗಿದೆ. ಸಮಸ್ಯೆಗಳು ಬಂದಾಗ ಅದಕ್ಕೆ ಸೂಕ್ತವಾದ ಪರಿಹಾರವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಮಾನವ ಹಕ್ಕು ಪ್ರಾಧಿಕಾರ ಉಡುಪಿ ಕಾರ್ಯದರ್ಶಿ ಚಂದ್ರ ಅಮೀನ್, ಮಿತ್ರ ಕುಮಾರ್ ಶೆಟ್ಟಿ, ಉದಯ ನಾಯಕ್, ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಸಂಸ್ಥಾಪಕರಾದ ಸುಬ್ರಹ್ಮಣ್ಯ, ನಿರ್ದೇಶಕಿ ಮಮತಾ, ಪ್ರಾಂಶುಪಾಲರದ ಡಾ. ಸೀಮಾ ಜಿ ಭಟ್, ಬೋಧಕ ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.