Saturday, October 19, 2024
Saturday, October 19, 2024

ಮಂಜರಪಲ್ಕೆ: ಜವಾಹರಲಾಲ್ ನೆಹರು ಉಲ್ಲೇಖಿತ ಬಂಡೆಗಲ್ಲು ಶಾಸನ ಅಧ್ಯಯನ

ಮಂಜರಪಲ್ಕೆ: ಜವಾಹರಲಾಲ್ ನೆಹರು ಉಲ್ಲೇಖಿತ ಬಂಡೆಗಲ್ಲು ಶಾಸನ ಅಧ್ಯಯನ

Date:

ಉಡುಪಿ, ಅ.24: ಕಾರ್ಕಳ ತಾಲೂಕಿನ ಮಂಜರಪಲ್ಕೆ ಪ್ರದೇಶದ ಪಕಲದ ಚರ್ಚಿನ ಮುಂಭಾಗದಲ್ಲಿರುವ ಬೃಹದಾಕಾರದ ಬಂಡೆಗಲ್ಲಿನ ಮೇಲೆ ಜವಾಹರಲಾಲ್ ನೆಹರುರವರ ಉಲ್ಲೇಖವಿರುವ ಶಾಸನವಿದ್ದು ಇದನ್ನು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿ ದಿಶಾಂತ್ ದೇವಾಡಿಗ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ. 20ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವು 10 ಸಾಲುಗಳನ್ನು ಒಳಗೊಂಡಿದ್ದು, ಬಂಡೆಗಲ್ಲಿನ ಮೇಲೆ ಕೊರೆಯಲಾಗಿದೆ.

1937ರಲ್ಲಿ ನೆಹರೂರವರು ಕಾರ್ಕಳದಲ್ಲಿ ನಡೆದ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಆ ಮಾತುಗಳನ್ನು ಇಲ್ಲಿಯ ಜನತೆಗೆ ತಿಳಿಸಲು ಅಥವಾ ನೆಹರೂರವರೇ ಈ ಪ್ರದೇಶಕ್ಕೆ (ಮಂಜರಪಲ್ಕೆ) ಭೇಟಿ ನೀಡಿದ ಸಂಧರ್ಭದಲ್ಲಿ ಅವರ ಹೇಳಿರುವಂತಹ ಮಾತುಗಳು ಶಾಶ್ವತವಾಗಿ‌ ಉಳಿಯಲು ಮತ್ತು ಅವರ ಭೇಟಿಯ ನೆನಪಿಗಾಗಿ ಈ ಶಾಸನವನ್ನು ಬಂಡೆಯ ಮೇಲೆ ಕೊರೆದಿರಬಹುದೆಂದು ಸಂಶೋಧನಾರ್ಥಿಯು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಶಾಸನ ಉಲ್ಲೇಖಿಸುವ ಅವರ ಮಾತುಗಳೆಂದರೆ- ನಾವು ಹೇಗೋ ನಮ್ಮ ಸಮಾವೇಶ ಹಾಗೆ ನಮ್ಮ ಚಿಂತನೆಗಳು ನಮ್ಮ ನಡವಳಿಕೆಗಳು ಇವೆ ಅದನ್ನು ರೂಪಿಸುವ ಶಕ್ತಿಗಳು ಭಾರತಾಂಬೆಯ ಪುಣ್ಯ ಗರ್ಭದಲ್ಲಿ ಜನಿಸಿದ ನಾವೆಲ್ಲರೂ ಆಕೆಯ ಅಕ್ಕರೆಯ ಮಕ್ಕಳು ಇಂದಿನ ಅಂದ ಚಂದದ ಕಂದ ಗಳೇ ನಾಳಿನ ಭಾರತದ ತಂದೆ ತಾಯಿಗಳು. ನಾವು ದೊಡ್ಡವರಾದರೆ ನಮ್ಮ ನಾಡು ದೊಡ್ಡದಾಗುತ್ತದೆ ಹಾಗಲ್ಲದೆ ನಾವು ಸಣ್ಣತನದ ಸಂಕುಚಿತ ಮನೋಭಾವನ ಭಾವದವರಾದರೆ ನಮ್ಮ ಭಾರತವು ಕನಿಷ್ಟ ರಾಷ್ಟ್ರವೆನಿಸುತ್ತದೆ. -ಜವಾಹರಲಾಲ್ ನೆಹರು. ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ವಿಶಾಲ್ ರೈ ಕೆ ಮತ್ತು ಜೀವನ್ ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!