Monday, February 24, 2025
Monday, February 24, 2025

ಜಂತ್ರ: ಗಡಿಕಲ್ಲು ಪತ್ತೆ

ಜಂತ್ರ: ಗಡಿಕಲ್ಲು ಪತ್ತೆ

Date:

ಉಡುಪಿ, ಅ.20: ನಂದಳಿಕೆ-ಬೆಳ್ಮಣ್‌ ವ್ಯಾಪ್ತಿಯ ಜಂತ್ರ ಗುಡ್ಡೆಯಲ್ಲಿ ಗಡಿಕಲ್ಲು ಪತ್ತೆಯಾಗಿದ್ದು, ‌ಶಿರ್ವ ಎಂ.ಎಸ್.ಆರ್‌.ಎಸ್ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿ ದಿಶಾಂತ್ ದೇವಾಡಿಗ ಅವರು ಅಧ್ಯಯನಕ್ಕೆ‌ ಒಳಪಡಿಸಿರುತ್ತಾರೆ. ಪತ್ತೆಯಾದ ಗಡಿಕಲ್ಲನ್ನು ಕಣ (ಗ್ರಾನೈಟ್) ಶಿಲೆಯಲ್ಲಿ ನಿರ್ಮಾಣ ಮಾಡಿದ್ದು, ಶಿವಲಿಂಗ ಮತ್ತು ‌ಮೇಲ್ಭಾಗದ‌ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯನ್ನು ನೋಡಬಹುದು. ಇಂತಹ ಕೆತ್ತನೆ‌ಯಿರುವ ಗಡಿ ಕಲ್ಲನ್ನು ಲಿಂಗಮುದ್ರೆ ಕಲ್ಲು‌ ಎಂದು ಕರೆಯಲಾಗುತ್ತದೆ.

ಪ್ರಾಚೀನ ಕಾಲದಲ್ಲಿ ಭೂಮಿಯನ್ನು ದಾನ ಕೊಟ್ಟಂತಹ ಸಂದರ್ಭದಲ್ಲಿ ದಾನ ಭೂಮಿಯ‌ ಚತುಸ್ಸೀಮೆಯನ್ನು ಗುರುತಿಸಲು ಈ ಲಿಂಗಮುದ್ರೆ‌ ಕಲ್ಲುಗಳನ್ನು ಹಾಕಲಾಗುತ್ತಿತ್ತು. ಸ್ಥಳೀಯರು ಇದನ್ನು ನಂದಳಿಕೆ ಮತ್ತು ಸೂಡ ಪ್ರದೇಶವನ್ನು ಬೇರ್ಪಡಿಸುವ ಗಡಿಕಲ್ಲು ಎಂದು ಹೇಳುತ್ತಾರೆ ಮತ್ತು ಈಗಲೂ ಇದನ್ನು ಪೂಜಿಸಿಕೊಂಡು ಇತಿಹಾಸವನ್ನು ರಕ್ಷಿಸಿಕೊಂಡು ಬಂದಿರುತ್ತಾರೆ. ಕಾಲಮಾನದ ದೃಷ್ಟಿಯಿಂದ ಈ ಲಿಂಗಮುದ್ರೆ‌ ಕಲ್ಲು ಸುಮಾರು 15-16ನೇ ಶತಮಾನಕ್ಕೆ ಸೇರುತ್ತದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಈ‌ ಕ್ಷೇತ್ರಕಾರ್ಯ ಶೋಧನೆಯಲ್ಲಿ ಪ್ರಸನ್ನ ಆಚಾರ್ಯ, ಮುಖೇಶ್, ಜೀವನ್ ಮತ್ತು ಸುಜಯ್ ಶೆಟ್ಟಿ ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೆಳೆಯರ ಬಳಗ ಕಾರ್ಕಡ- ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

ಸಾಲಿಗ್ರಾಮ, ಫೆ.23: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ...

ಭಜನಾ ಮಂಗಲೋತ್ಸವ

ಸಾಸ್ತಾನ, ಫೆ.23: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ...

ಹೀಗೊಂದು ಜಾಹೀರಾತು

ನೀವು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ಇದನ್ನು ಮಾಡಿರಿ, ಮಿಲಿನಿಯರ್ ಆಗಲು ಹೀಗೆ...
error: Content is protected !!